ಪುತ್ತೂರು: ಜನಪ್ರಿಯ ಮಲ್ಟಿ ಸ್ಪೆಷಲಿಟಿ ಆಸ್ಪತ್ರೆ ಪಡಿಲು, ಮಂಗಳೂರು ಮತ್ತು ಫಝಲ್ ಮೆಮೊರೇಬಲ್ ಮೆಡಿಕಲ್ ಹೆಲ್ಪ್ ಲೈನ್ & ಚಾರಿಟೇಬಲ್ ಟ್ರಸ್ಟ್ (ರಿ.) ಕಬಕ ಇದರ ಮೂರನೇ ವಾರ್ಷಿಕೋತ್ಸವದ ಪ್ರಯುಕ್ತ ಫ್ರೆಂಡ್ಸ್ ಆಟೋ ಯೂನಿಯನ್ ಕಬಕ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ.) ಜಂಟಿ ಆಶ್ರಯದಲ್ಲಿ ಮರ್ಹೂಂ ಮಾಸ್ಟರ್ ಮುಹಮ್ಮದ್ ಫಝಲ್ ಸ್ಮರಣಾರ್ಥ ಸಾರ್ವಜನಿಕ ಬೃಹತ್ ರಕ್ತದಾನ ಶಿಬಿರವು ದಿನಾಂಕ 13 ಜುಲೈ 2025 ಆದಿತ್ಯವಾರದಂದು ಪುತ್ತೂರು ಕಬಕದ ಫ್ರೆಂಡ್ಸ್ ರಿಕ್ಷಾ ಪಾರ್ಕ್ ನಲ್ಲಿ ಯಶಸ್ವಿಯಾಗಿ ನಡೆಯಿತು.

ಜೀವದಾನಿಯಾದ 44 ಜನಸ್ನೇಹಿ ರಕ್ತದಾನಿಗಳು

ಜನಪ್ರಿಯ ಆಸ್ಪತ್ರೆ ಪಡೀಲ್ ಮಂಗಳೂರು ಇವರ ವತಿಯಿಂದ ಹಲವಾರು ಸಾಮಾಜಿಕ ಕಳಕಳಿಯ ಕೆಲಸಗಳು ಆಗುತ್ತಿದ್ದು ಅದರೊಂದಿಗೆ ರಕ್ತದಾನದ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹಾಗೂ ಹೆಚ್ಚಿನ ಯುವಜನತೆ ಅಮೂಲ್ಯ ಸಾಮಾಜಿಕ ಕಾರ್ಯವಾದ ರಕ್ತದಾನ ಮಾಡಲು ಮುಂದೆ ಬರಬೇಕು.

ಈ ನಿಟ್ಟಿನಲ್ಲಿ ರಕ್ತದ ಕೊರತೆಯೂ ಯಾವ ರೋಗಿ ಹಾಗೂ ಅವರ ಸಂಬಂಧಿಕರನ್ನು ತೊಂದರೆಗೆ ಒಳಪಡದೆ ನಿರಾಯಸವಾಗಿ ದೊರೆಯುವಂತಗಬೇಕು ಎನ್ನುವುದು ಜನಪ್ರಿಯ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಅಬ್ದುಲ್ ಬಶೀರ್ ವಿ ಕೆ ಅವರ ಆಶಯವಾಗಿದೆ.

ರಕ್ತದಾನ ಮಾಡಿ ಮಾನವೀಯತೆ ಮೆರೆದ ಸರ್ವ ಸಹೃದಯೀ ರಕ್ತದಾನಿಗಳಿಗೂ,ರಕ್ತನಿಧಿ ಸಿಬ್ಬಂದಿ ವರ್ಗಕ್ಕೂ, ಕಾರ್ಯಕ್ರಮದ ಯಶಸ್ಸಿಗಾಗಿ ಹಗಲಿರುಳು ಶ್ರಮಿಸಿದ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳಿಗೂ,ಮಾದ್ಯಮ ವರದಿಗಾರರಿಗೂ,ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ಸಂಘಟಕರ ವತಿಯಿಂದ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸಲಾಯಿತು.