ಮಂಗಳೂರು: ವಿಶೇಷ ಆರ್ಥಿಕ ವಲಯ ನಿಯಮಿತ (MSEZL) ಕರ್ನಾಟಕ ರಾಜ್ಯ ಮಾಲಿನ್ಯನಿಯಂತ್ರಣ ಮಂಡಳಿ, ಮಂಗಳೂರು, ಅರಣ್ಯ ಇಲಾಖೆ, ಮಂಗಳೂರು ವಲಯ ಇವರ ಸಂಯುಕ್ತ ಅಶ್ರಯದಲ್ಲಿ ವಿಶ್ವ ಪರಿಸರ ದಿನ ಪ್ರಯುಕ್ತ ಸಾಮೂಹಿಕ ಗಿಡ ನಾಟಿ ಮತ್ತು ಪರಿಸರ ಜಾಗೃತಿ ಕಾರ್ಯಕ್ರಮವನ್ನು ದಿನಾಂಕ 10.06.2026 ರಂದು MSEZ ನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯನಿಯಂತ್ರಣ ಮಂಡಳಿಯ ಹಿರಿಯ ಪರಿಸರ ಅಧಿಕಾರಿ ಶ್ರೀ ರಾಜಶೇಖರ್ ಪುರಾಣಿಕ್, ಕಾರ್ಯಕ್ರಮವನ್ನು ಉದ್ಘಾಟಿಸಿ ಸಾರ್ವಜನಿಕರ ಭಾಗವಹಿಸಿವಿಕೆಯಿಂದ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯ,ಪರಿಸರಕ್ಕೆ ಮಾರಕವಾಗುವ ತ್ಯಾಜ್ಯಗಳನ್ನು ಯಾವ ರೀತಿಯಲ್ಲಿ ವಿಲೆವಾರಿ ಮಾಡಬೇಕು ಹಾಗೂ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವಲ್ಲಿ ನಾವೆಲ್ಲ ಪ್ರಯತ್ನಿಸಬೇಕೆಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಡಾ.ಜಿ.ಶ್ರೀನಿಕೇತನ್, ನಿವೃತ ಪ್ರೋಫೆಸರ್,NITK. ಕೈಗಾರಿಕಾ ಘಟಕಗಳು ತಮ್ಮ ಉತ್ಪಾದನೆಯಲ್ಲಿ ಶೂನ್ಯ ವಿಸರ್ಜನೆಗೆ ಒತ್ತು ನೀಡಬೇಕು ಮತ್ತು ಹೊಸ ಹೊಸ ತಂತ್ರಜ್ಞಾನವನ್ನು ಅಳವಡಿಸಿ ಮಾಲಿನ್ಯ ಮುಕ್ತ ಕೈಗಾರಿಕಾ ಪ್ರದೇಶವನ್ನು ನಿರ್ಮಾಣ ಮಾಡಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಡಾ.ಮಂಜು ಆರ್ , ಮಂಗಳೂರು ವಿಶೇಷ ಅರ್ಥಿಕ ವಲಯ ನಿಯಮಿತ ದ ಮುಖ್ಯಕಾರ್ಯನಿರ್ವಾಹಣಾಧಿಕಾರಿ ವಿ.ಸೂರ್ಯನಾರಯಣ,ಮತ್ತು ಒಪರೇಷನ್ ಹೇಡ್ ಹೀಟಾ ಶ್ರೀನಿವಾಸಲು, , ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ಶ್ರವಣ್ ಕುಮಾರ್ ಮತ್ತು MSEZ ನ Specified Officer ಲಯೊನೆಲ್ ಎನ್ ಫೆರ್ನಾಂಡಿಸ್ ಉಪಸ್ಥಿತರಿದ್ದು ಶುಭ ಹಾರೈಸಿದರು.

ಕಾರ್ಯಕ್ರಮದಂದು ಸುಮಾರು ೧೫೦ ಗಿಡ ನೆಡಲಾಯಿತು ಮತ್ತು ಸುಮಾರು ಎರಡು ಕೀಲೊ ಮೀಟರ್ ರಸ್ತೆಯ ಎರಡು ಬದಿಯಲ್ಲಿ ಕಸ ತೆಗೆಯುವುದರ ಮುಖಾಂತರ ಸ್ವಚ್ಛತೆಯನು ಮಾಡಲಾಯಿತು. ಕಾರ್ಯಕ್ರಮದಲ್ಲಿ ಸುಮಾರು ೧೫೦ ಕ್ಕೂ ಹೆಚ್ಚು ಕೈಗಾರಿಕಾ ಘಟಕಗಳ ಸಿಬ್ಬಂದಿಗಳು ಭಾಗವಹಿಸಿದರು. MSEZL ನ ಪ್ರಬಂಧಕರು ,ವಿಜೇಶ್ ಶೆಟ್ಟಿ ಸ್ವಾಗತಿಸಿ, ಹಿರಿಯ ಪ್ರಬಂಧಕರು ಯೋಗೀಶ್ ಕಲಸಡ್ಕ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.