ಮಂಗಳೂರು: ಸೋಶಿಯಲ್ ಮೀಡಿಯಾದ ಪ್ರತೀಕಾರದ ಪೋಸ್ಟ್ ಗಳ ವಿರುದ್ದ ಕೊನೆಗೂ ಮಂಗಳೂರು ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಬೆನ್ನಲ್ಲೇ ಮಂಗಳೂರು ಪೊಲೀಸರು ಅಲರ್ಟ್ ಆಗಿದ್ದಾರೆ. ಪ್ರತೀಕಾರದ ಸಂದೇಶ ಪೋಸ್ಟ್ ಸಂಬಂಧ 12 ಪ್ರಕರಣ ದಾಖಲಾಗಿದೆ.

ಮುಲ್ಕಿ, ಉರ್ವಾ, ಬರ್ಕೆ, ಉತ್ತರ, ದಕ್ಷಿಣ, ಮೂಡಬಿದ್ರೆ, ಕಾವೂರು ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಹಲವು ಇನ್ಸ್ಟಾಗ್ರಾಂ ಪೇಜ್, ಫೇಸ್ಬುಕ್ ಪೋಸ್ಟ್ ಹಾಗೂ ವಾಟ್ಸಪ್ ಮೆಸೇಜ್ ಗಳ ವಿರುದ್ದ ಎಫ್ಐಆರ್ ದಾಖಲಿಸಲಾಗಿದೆ.
beary_royal_nawab ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ “ಶತ್ರುಸಂಹಾರಶರುವಾಗಿದೆ, ಪ್ರತಿರೋಧ ಅಪರಾಧವಲ್ಲ” ಎಂಬುದಾಗಿ ಪೋಸ್ಟ್ ಹಾಕಲಾಗಿದೆ. ಸುಹಾಸ್ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ. ನಮ್ಮಬಲವನ್ನು ಈಗ ತೋರಿಸದೇ ಇದ್ದಲ್ಲಿ ಮುಂದೊಂದು ದಿನ ನಾವೇ ಇರುವುದಿಲ್ಲ ಎಂದು ಮತ್ತೊಂದು ಪೋಸ್ಟ್ ಹಾಕಲಾಗಿದೆ.

hindu_mantra_ ಎಂಬ ಇನ್ಸ್ಟಾಗ್ರಾಮ್‌ನಲ್ಲಿ “ನಮಗೆ ಯಾವುದೇ ಉತ್ತರಗಳು ಬೇಡ ರಕ್ತಕ್ಕೆ ರಕ್ತವೇ ಉತ್ತರವಾಗಬೇಕು ಜೀವಕ್ಕೆ, ಜೀವನೇ ಬೇಕು” ಎಂಬುದಾಗಿ ಸ್ಟೋರಿ ಹಾಕಲಾಗಿದೆ. ullaltho_makka ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ‘ಪ್ರತಿರೋಧ ಅಪರಾಧವಲ್ಲ..” ಎಂಬ ಪೋಸ್ಟ್ ಹಾಕಲಾಗಿದೆ.
ಹಲವು ಪೋಸ್ಟ್ ಗಳಲ್ಲಿ ಹತ್ಯೆ ಸಮರ್ಥನೆ ಹಾಗೂ ಪ್ರತೀಕಾರದ ಪೋಸ್ಟ್ ಹಾಕಿದ್ದು, ಸುಹಾಸ್ ಹತ್ಯೆಗೂ ಮುನ್ನವೂ ರಿವೇಂಜ್ ಪೋಸ್ಟ್ ಹಾಕಿದ್ದಾರೆ. ಹೀಗಾಗಿ ಪೊಲೀಸ್ ವೈಫಲ್ಯದ ಆರೋಪ ಬೆನ್ನಲ್ಲೇ ಮಂಗಳೂರು ಪೊಲೀಸರು ಅಲರ್ಟ್ ಆಗಿದ್ದಾರೆ.

