ಮಂಗಳೂರು: ರೋಹನ್ ಕಾರ್ಪೋರೇಶನ್ ಕಟ್ಟಡ ಕಾಮಗಾರಿ ವೇಳೆ ಮಣ್ಣು ಕುಸಿದು ಕಾರ್ಮಿಕ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕಟ್ಟಡ ಕಾಮಗಾರಿ ಕಂಟ್ರಾಕ್ಟರ್, ಸೂಪರ್ವೈಸರ್ಸ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಒಟ್ಟು ಮೂವರ ವಿರುದ್ಧಕದ್ರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕಾಮಗಾರಿ ಸ್ಥಳದ ಮುಖ್ಯಸ್ಥ ಸಂತೋಷ್ ಹಾಗು ಹರ್ಷವರ್ಧನ್ ಮತ್ತು ಸೈಟ್ ಇಂಚಾರ್ಜ್ ನಾಗರಾಜ್ ವಿರುದ್ಧ ಕದ್ರಿ ಪೊಲೀಸ್ ಠಾಣೆಯಲ್ಲಿ ಬಿಎನ್ ಎಸ್ 105 ,125 a ,125 B ಯಡಿ ಕೇಸ್ ದಾಖಲಾಗಿದ್ದು, ಬದುಕುಳಿದ ಕಾರ್ಮಿಕ ಬಿಹಾರ ಮೂಲದ ಕಾರ್ಮಿಕ ರಾಜಕುಮಾರ್ ದೂರಿನ ಆಧಾರದ ಮೇಲೆ ಎಫ್ ಐ ಆರ್ ದಾಖಲಾಗಿದೆ.
ಪೊಲೀಸರು ಲೇಬರ್ ಕಂಟ್ರಾಕ್ಟರ್ ವೇಣುಗೋಪಾಲ್ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಜುಲೈ 3 ರಂದು ಮಂಗಳೂರಿನ ಬಲ್ಮಠ ಸಮೀಪ ನಡೆದಿದ್ದ ಘಟನೆ ನಡೆದಿತ್ತು.

