ಮಂಗಳೂರು: ಆರು ಜನ ಸೇರಿ ಸುಹಾಸ್ ಶೆಟ್ಟಿ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಾರೆ. ಹತ್ಯೆಯ ಪ್ರಮುಖ ಆರೋಪಿ ಸಫ್ವಾನ್. ಸಫ್ವಾನ್ ಮೇಲೆ 2023ರಲ್ಲಿ ಮೇಲೆ ಮಾರಣಾಂತಿಕ ಹಲ್ಲೆಯಾಗುತ್ತದೆ. ಪ್ರಶಾಂತ್, ಧನರಾಜ್ ಹಲ್ಲೆ ಮಾಡಿದ್ದರು ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಸುದ್ದಿಗೋಷ್ಠಿ ನಡೆಸಿದರು.
ಈ ಇಬ್ಬರು ಸುಹಾಸ್ ಶೆಟ್ಟಿ ಸ್ನೇಹಿತರು. ಸಫ್ವಾನ್ ಗೆ ಸುಹಾಸ್ ಕೊಲೆ ಮಾಡುವ ಆತಂಕ ಇತ್ತು. ಈ ಹಿನ್ನಲೆ ಸುಹಾಸ್ ನನ್ನು ಕೊಲೆ ಮಾಡಲು ತೀರ್ಮಾನ ಮಾಡಿದ್ದ. ಇದೇ ವೇಳೆ ಹತ್ಯೆಯಾಗಿದ್ದ ಫಾಝೀಲ್ ನ ತಮ್ಮನನ್ನು ಸಂಪರ್ಕಿಸಿ ಸುಹಾಸ್ ನ ಕೊಲೆ ಮಾಡೋಕೆ ತೀರ್ಮಾನ ಮಾಡುತ್ತಾರೆ. ಸುಹಾಸ್ ಕೊಲೆಗೆ ಐದು ಲಕ್ಷ ರೂಪಾಯಿ ಫಾಜಿಲ್ನ ತಮ್ನ ಆದಿಲ್ ಸಫ್ವಾನ್ ನ ತಂಡಕ್ಕೆ ನೀಡುದಾಗಿ ಹೇಳಿರುತ್ತಾನೆ.
ಅದರಲ್ಲಿ ಮೂರು ಲಕ್ಷ ಅಡ್ವಾನ್ಸ್ ನೀಡಿರುತ್ತಾನೆ. ಬಳಿಕ ಒಂದು ತಂಡವನ್ನು ಹತ್ಯೆಗಾಗಿ ಸಫ್ವಾನ್ ರೆಡಿ ಮಾಡ್ತಾನೆ. ನಿಯಾಜ್ ನ ಇಬ್ಬರು ಸ್ನೇಹಿತರು ನಾಗಾರಾಜ್ ಮತ್ತು ರಂಜಿನ್ ನ್ನು ಸಂಪರ್ಕ ಮಾಡುತ್ತಾರೆ. ಈ ಇಬ್ಬರು ಸಫ್ವಾನ್ ಮನೆಯಲ್ಲಿ ಎರಡು ದಿನಗಳಿಂದ ವಾಸ ಮಾಡುತ್ತಾರೆ. ಮೇ 1 ರಂದು ಸುಹಾಸ್ ಚಲನವಲನಗಳನ್ನು ಗಮನಿಸಿ ಕೊಲೆ ಮಾಡಿದ್ದಾರೆ ಎಂದರು.

