ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆಯು 2024-25ರ ಹಣಕಾಸು ವರ್ಷದ ಮೊದಲ ತ್ತೈಮಾಸಿಕದಲ್ಲಿ ಕಳೆದ ಬಾರಿಗಿಂತ ಶೇ.21ರಷ್ಟು ಏರಿಕೆ ಕಂಡಿದೆ.

3,93,598 ದೇಶೀಯ ಮತ್ತು 1,59,091 ಅಂತಾರಾಷ್ಟ್ರೀಯ ಸಹಿತ ಒಟ್ಟು 5,52,689 ಪ್ರಯಾಣಿಕರು ಪ್ರಯಾಣಿಸಿದ್ದಾರೆ. 2023-24ರ ಮೊದಲ ತ್ತೈಮಾಸಿಕದಲ್ಲಿ 4,57,859 ಮಂದಿ ಪ್ರಯಾಣಿಸಿದ್ದರು. ವಿಮಾನ ನಿಲ್ದಾಣವು ಈಗ ಮಾಸಿಕ 1,80,000ಕ್ಕೂ ಹೆಚ್ಚು ಪ್ರಯಾಣಿಕರನ್ನು ನಿರ್ವಹಿಸುತ್ತಿದೆ. ದುಬಾೖಯು ಹೆಚ್ಚು ಪ್ರಯಾಣಿಸುವ ಅಂತಾರಾಷ್ಟ್ರೀಯ ತಾಣವಾಗಿದ್ದರೆ, ಬೆಂಗಳೂರು ಹಾಗೂ ಮುಂಬಯಿ ದೇಶೀಯ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಬುಧಾಬಿ, ಬಹ್ರೈನ್‌, ದಮ್ಮಾಮ್‌, ದುಬಾೖ, ದೋಹಾ, ಜೆಡ್ಡಾ, ಕುವೈಟ್‌ ಮತ್ತು ಮಸ್ಕತ್‌ ಸಹಿತ 8 ಅಂತಾರಾಷ್ಟ್ರೀಯ ಸ್ಥಳಗಳಿಗೆ ಸೇವೆಗಳನ್ನು ಒದಗಿಸುತ್ತಿದೆ