ಮಂಗಳೂರು: ಎ.ಜೆ. ಇನ್ಸಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟಿನ ಸಹಾಯಕ ಪ್ರಾಧ್ಯಾಪಕರಾದ  ಮಹೇಶ್ ಪಿ.ಜಿ. ಅವರು ಮಂಡಿಸಿದ “ಸೀನಿಯರ್ ಸಿಟಿಝನ್ಸ್ – ಸೋಷಿಯೋ ಇಕನಾಮಿಕ್ ಸೆಕ್ಯೂರಿಟಿ, ಚಾಲೆಂಜಸ್ ಆಂಡ್ ಪಾಸಿಬಿಲಿಟೀಸ್” ಎಂಬ ಸಂಶೋಧನಾ ಮಹಾ ಪ್ರಬಂಧಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ವಾಣಿಜ್ಯಶಾಸ್ತ್ರ ವಿಷಯದಲ್ಲಿ ಅತ್ಯುತ್ತಮ ಶ್ರೇಣಿಯೊಂದಿಗೆ ಪಿಹೆಚ್.ಡಿ. ಪಡೆದಿದ್ದಾರೆ.

ಈ ಸಂಶೋಧನೆಯನ್ನು ಮಂಗಳೂರಿನ ಕಾರ್‌ಸ್ಟಿಟ್ ಸರಕಾರಿ ಪದವಿ ಪೂರ್ವ ಕಾಲೇಜಿನ ಸಹಪ್ರಾಧ್ಯಾಪಕರಾದ ಡಾ| ವಾಲ್ಟರ್ ಡಿಸೋಜಾ ಅವರ ಮಾರ್ಗದರ್ಶನದಲ್ಲಿ ಪೂರ್ಣಗೊಳಿಸಲಾಗಿದೆ.

ಬ್ರಹ್ಮಾವರದ ಚಾಂತಾರು ಮೂಲದ ಶ್ರೀ ಮಹೇಶ್ ಪಿ.ಜಿ. ಇವರು ಶ್ರೀ ಗಣಪತಿ ಭಟ್ ಮತ್ತು ಶ್ರೀಮತಿ ಸವಿತಾ ಅವರ ಪುತ್ರರಾಗಿರುತ್ತಾರೆ. ಪತ್ನಿ ಶ್ರೀಮತಿ ಶಿಲ್ಪಾ ಮತ್ತು ಮಗ ಮಾ| ಗಹನ್ ಎಂ. ಭಟ್ ರವರು ಇವರ ಶೈಕ್ಷಣಿಕ ಪಯಣದಲ್ಲಿ ಸದಾ ಬೆಂಬಲ ನೀಡಿದ್ದಾರೆ.