ಪುತ್ತೂರು: ಲವ್ ಸೆಕ್ಸ್ ಧೋಖಾ ಪ್ರಕರಣದಲ್ಲಿ ಕೃಷ್ಣ ಜೆ ರಾವ್ ಡಿಎನ್ಎ ಟೆಸ್ಟ್ ರಿಪೋರ್ಟ್ ಪಾಸಿಟಿವ್ ಎಂದು  ಸಂತ್ರಸ್ತ ಕುಟುಂಬ ಮಾಧ್ಯಮಕ್ಕೆ ಹೇಳಿಕೆ ನೀಡಿದೆ.

ಸಂತ್ರಸ್ತೆಯ ಪರವಾಗಿ  ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕೆ.ಪಿ. ನಂಜುಂಡಿ ಹೇಳಿಕೆ ನೀಡಿದರು. ಸದ್ಯ ಜಾಮೀನಿನ ಮೇಲೆ  ಆರೋಪಿ ಕೃಷ್ಣ ಜೆ ರಾವ್ ಹೊರಬಂದಿದ್ದಾರೆ. ಕೂಡಲೇ ಸಂತ್ರಸ್ತೆಯ ಜೊತೆ ಮದುವೆ ಮಾಡಿಸಿಕೊಡುವಂತೆ  ಕೆಪಿ ನಂಜುಂಡಿ ಒತ್ತಾಯಿಸಿದರು.

ಆರೋಪಿ ಕೃಷ್ಣ ಜೆ ರಾವ್ ಡಿಎನ್ ಎ ಟೆಸ್ಟ್ ರಿಪೋರ್ಟ್ ನಲ್ಲಿ  ಪಾಸಿಟಿವ್ ಪತ್ತೆಯಾಗಿದೆ. ಕೃಷ್ಣ ಜೆ ರಾವ್ ಬಿಜೆಪಿ ಮುಖಂಡರೊಬ್ಬರ ಪುತ್ರನಾಗಿದ್ದಾನೆ. ಮದುವೆಯಾಗುವುದಾಗಿ ನಂಬಿಸಿ ಬಳಿಕ ಗರ್ಭಾವತಿಯನ್ನಾಗಿ ಮಾಡಿ  ಕೃಷ್ಣ ಜೆ ರಾವ್ ವಂಚಿಸಿದ್ದಾರೆ.

ಮೂರು ತಿಂಗಳಿನಿಂದ  ನ್ಯಾಯಕ್ಕಾಗಿ  ಸಂತ್ರಸ್ತೆ ಕುಟುಂಬ ಹೋರಾಡುತ್ತಿದೆ. ಪುತ್ತೂರು ನ್ಯಾಯಾಧೀಶರ ಮುಂದೆ ರಕ್ತ ಸಂಗ್ರಹ ನಡೆದಿತ್ತು. ಆರೋಪಿ ಕೃಷ್ಣ ಜೆ ರಾವ್, ಸಂತ್ರಸ್ತೆ ಹಾಗೂ ಮಗುವಿನ ರಕ್ತ ಸಂಗ್ರಹಿಸಲಾಗಿತ್ತು. ಬಳಿಕ ಬೆಂಗಳೂರಿಗೆ ಪ್ರಯೋಗಾಲಯಕ್ಕೆ ರಕ್ತ ಸಂಗ್ರಹ ಮಾದರಿಯನ್ನ ಕಳುಹಿಸಲಾಗಿತ್ತು.

ಆರೋಪಿ ಕೃಷ್ಣ ಜೆ ರಾವ್ ಕುಟುಂಬ ಡಿಎನ್ ಎ ಟೆಸ್ಟ್ ಮಾಡಿಸುವಂತೆ ಒತ್ತಾಯಿಸಿತ್ತು. ಇದೀಗ ಡಿಎನ್ ಎ ಟೆಸ್ಟ್ ನಲ್ಲಿ ಆರೋಪಿ ಕೃಷ್ಣ ಜೆ ರಾವ್ ಪಾಸಿಟಿವ್ ಪತ್ತೆಯಾಗಿದೆ. ಆರೋಪಿ ಕೃಷ್ಣ ಜೆ ರಾವ್ ನಿಂದಲೇ ಸಂತ್ರಸ್ತೆ ಗರ್ಭಾವತಿಯಾಗಿರುವುದು ಸಾಬೀತಾಗಿದೆ. ಹಿಂದೂ ಸಂಘಟನೆಯೇ ಮುಂದೆ ನಿಂತು ಇಬ್ಬರ ಮದುವೆ ಮಾಡಿಸಬೇಕು.

ನಮಗೆ ಕಾನೂನಿ ಹೋರಾಟಕ್ಕೆ ಇಷ್ಟವಿಲ್ಲ. ಇಬ್ಬರು ಒಂದಾಗಿ ಬಾಳಬೇಕು ಎಂಬುದು ನಮ್ಮ ಇಚ್ಛೆ. ಹಿಂದುತ್ವದ ಭದ್ರಕೋಟೆ ಪುತ್ತೂರಿನಲ್ಲಿರುವ ಹಿಂದೂ ಮುಖಂಡರ ಮುಂದೆ ಬರಬೇಕು. ಎರಡೂ ಕುಟುಂಬಗಳನ್ನ ಒಂದು ಮಾಡುವ ಕೆಲಸ ಮಾಡಬೇಕು ಎಂದರು.