ಮಂಗಳೂರು : ಹುಬ್ಬಳ್ಳಿ ,ಧಾರವಾಡ ಜಿಮ್ನಲ್ಲಿ ನಡೆದ ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಎಚ್‌ ಪಿ ಭಜರಂಗದಳ ಮಂಗಳೂರು ಈ ಪ್ರಕರಣವನ್ನ ಖಂಡಿಸಿದೆ.

ಈ ಮುಂಚೆನೇ ನಾವು ಎಚ್ಚರಿಕೆಯನ್ನ ನೀಡಿದ್ದೆವು. ಆದರೆ ಯಾರು ಕೂಡ ಗಂಭೀರವಾಗಿ ಪರಿಗಣಿಸಲಿಲ್ಲ. ಮಂಗಳೂರು ಸುರತ್ಕಲ್ ನಲ್ಲಿ ಇಂತಹ ಒಂದು ಪ್ರಕರಣ ನಡೆದಿತ್ತು. ಎಲ್ಲಾ ಪ್ರಕರಣವನ್ನ ಎಸ್‌ ಐ ಟಿಗೆ ನೀಡಬೇಕು.

ಮಂಗಳೂರಿನಲ್ಲೂ ಅನೇಕ ಜಿಮ್ ಗಳಿವೆ , ಮುಸ್ಲಿಂ ಟ್ರೈನೆರ್ಸ್ ಇದ್ದಾರೆ. ಯುವತಿಯರು , ಪೋಷಕರು ಇದ್ರ ಬಗ್ಗೆ ಪರಿಶೀಲಿಸಿ ಜಿಮ್ಗೆ ಕಳುಹಿಸಿ ಎಂದು ಪ್ರದೀಪ್ ಸರಿಪಳ್ಳ ವಿಎಚ್‌ ಪಿ ಮುಖಂಡ ಹೇಳಿದರು.