ಮಂಗಳೂರು: ಅಂಕೋಲ ಶಿರೂರು ಮಾದರಿಯಲ್ಲಿ ಮಂಗಳೂರಿನಲ್ಲೂ ಅಪಾಯ ಸೃಷ್ಟಿಯಾಗಿದೆ. ರಾಷ್ಟ್ರೀಯ ಹೆದ್ದಾರಿ 169ರ ಕೆತ್ತಿಕಲ್ ನ ಪರಿಸ್ಥಿತಿ ಅಪಾಯದಂಚಿನಲ್ಲಿದೆ.
ಕ್ಷಣಕ್ಕೂ ಕ್ಷಣಕ್ಕೂ ಅಪಾಯ ಕಾದಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಬೃಹತ್ ಗುಡ್ಡವಿದೆ. ನಿನ್ನೆ ಸುರಿದ ಭಾರಿ ಮಳೆಯಿಂದಾಗಿ ನಿರಂತರವಾಗಿ ಗುಡ್ಡದ ಮಣ್ಣು ಕುಸಿಯುತ್ತಿದೆ. ಗುಡ್ಡ ಕುಸಿತವಾದ ಪಕ್ಕದಲ್ಲೇ ರಾಷ್ಟ್ರೀಯ ಹೆದ್ದಾರಿಯನ್ನು ಒಳಗೊಂಡಿದೆ.

ಕೆತ್ತಿಕಲ್ ಗುಡ್ಡವನ್ನು ಹೆದ್ದಾರಿ ನಿರ್ಮಾಣಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಗೆದಿದ್ದಾರೆ. ಈ ಮಳೆಗಾಲದ ಸಂದರ್ಭ ಅಪಾಯಕಾರಿ ಪರಿಸ್ಥಿತಿ ಉಂಟಾಗಿದ್ದು, ದಿನನಿತ್ಯ ಸಂಚರಿಸುವ ವಾಹನ ಸವಾರರಿಗೂ ಆತಂಕ ಸೃಷ್ಟಿಯಾಗಿದೆ.

