ಮಂಗಳೂರು: ಹಿಂದೂ ಮುಖಂಡ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ನಂತರ ಮತ್ತೋರ್ವ ಹಿಂದೂ ಮುಖಂಡನಿಗೂ ಡೇಟ್ ಫಿಕ್ಸ್ ಮಾಡಿ, ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಹಾಕಲಾಗಿದೆ.
ಹಿಂದೂ ಮುಖಂಡ ಭರತ್ ಕುಮ್ಡಲ್‌ಗೆ ಜೀವ ಬೆದರಿಕೆ ಹಾಕಿದ್ದು, 5/5/ 2025 ರಾತ್ರಿ 9.30ಕ್ಕೆ ನಿನ್ನ ಸ್ಥಳದಲ್ಲೇ ಕೊಲೆ ಮಾಡುದಾಗಿ ಪೋಸ್ಟ್ ಹಾಕಲಾಗಿದೆ. ಸುಹಾಸ್ ಶೆಟ್ಟಿ ಪೋಟೋಗೆ ರೈಟ್ ಚಿಹ್ನೆ ಹಾಕಿ ವಿಕೃತಿ ಮೆರೆದಿದ್ದಾರೆ.
SDPI ಮುಖಂಡ ಅಶ್ರಫ್ ಕಲಾಯಿ ಹತ್ಯೆಯ ಪ್ರಮುಖ ಆರೋಪಿ ಭರತ್ ಕುಮ್ಡೇಲು. 2017 ರ ಜೂನ್ 21 ರಂದು ಅಶ್ರಫ್ ಕಲಾಯಿ ಹತ್ಯೆಯಾಗಿದ್ದನು. ಬಂಟ್ವಾಳದ ಬೆಂಜನಪದವು ಎಂಬಲ್ಲಿ ಅಶ್ರಫ್ ಕಲಾಯಿ ಬರ್ಬರವಾಗಿ ಹತ್ಯೆಗೀಡಾಗಿದ್ದನು.

SDPI ನಲ್ಲಿ ನಾಯಕ ಅಶ್ರಫ್ ಕಲಾಯಿ ಮುಂಚೂಣಿಯಲ್ಲಿದ್ದನು. ಅಶ್ರಫ್ ಕಲಾಯಿ ಹತ್ಯೆ ಬಳಿಕ ಪ್ರತಿಕಾರವಾಗಿ ಬಂಟ್ವಾಳದ ಶರತ್ ಮಡಿವಾಳ ಹತ್ಯೆಯಾಗಿತ್ತು.
ಸುಹಾಸ್ ಶೆಟ್ಟಿ ಹತ್ಯೆ ಬೆನ್ನಲ್ಲೇ ಶರಣ್ ಪಂಪ್ವೆಲ್, ಭರತ್ ಕುಮ್ಡೇಲ್ ಗೆ ಜೀವ ಬೆದರಿಕೆ ಹಾಕಲಾಗಿದೆ. ಮುಂದಿನ ಟಾರ್ಗೆಟ್ ಶರಣ್ ಪಂಪ್ವೆಲ್ ಎಂದು ಪೋಸ್ಟ್ ಹಾಕಲಾಗಿದೆ. ಪೊಲೀಸ್ ಇಲಾಖೆಯ ಕ್ರಮದ ನಡುವೆ ದ್ವೇಷ ಕಾರುವ ಪೋಸ್ಟ್ ಹಾಕಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ಮುಖಂಡರಿಗೆ ಜೀವ ಬೆದರಿಕೆ ಹಾಕಲಾಗಿದೆ.
ಅಶ್ರಫ್ ಕೊಂದ ಭರತ್ ನನ್ನ ಮರೆತಿಲ್ಲ ಅಂತ ಮತ್ತೆ ಪೋಸ್ಟ್. Wait and watch ಎಂದು ತಲವಾರು ಫೋಟೋ On fixed leader ಎಂಬ ಹೆಸರಿನ ಇನ್ಸ್ಟಾಗ್ರಾಂ ಪೇಜ್ ನಲ್ಲಿ ಪೋಸ್ಟ್ ಹಾಕಲಾಗಿದೆ.

