ಮಂಗಳೂರು : ಬಿಕರ್ನಕಟ್ಟೆ ಜಯಶ್ರೀ ಗೇಟ್ ನಿಂದ ಅದು ಮಾರೋಲಿ ದೇವಸ್ಥಾನ ಮತ್ತು ಪಂಪವೆಲ್ ರಸ್ತೆಗೆ ಸಂಪರ್ಕ ರಸ್ತೆಯಲ್ಲಿ ಇಂದು ಸಂಜೆ ಸುಮಾರು 8.25 ಹೊತ್ತಿಗೆ ನಾನೂ ಮಕ್ಕಳ ಜೊತೆ ಆ ದಾರಿಯಲ್ಲಿ ಮನೆಗೆ ನಡೆದುಕೊಂಡು ಹೋಗುವಾಗ ವಿದ್ಯುತ್ ತಂತಿ ತುಂಡಾಗಿ ರಸ್ತೆಯಲ್ಲಿ ಬಿದ್ದಿತ್ತು.

ಆ ಕೂಡಲೇ ನಾನೂ ಕೆಇಬಿ ಜೆಇ ಯವರಿಗೆ ಕಾಲ್ ಮಾಡಿ ತಿಳಿಸಿದೆ. ಇನ್ನೂ ಮುಂದೆ ನೋಡುವಾಗ ಆ ತಂತಿಯಾ ಇನ್ನೊಂದು ದೊಡ್ಡ ಭಾಗ ರಸ್ತೆಯಲ್ಲೇ ಬಿದ್ದಿದ್ದು ಕೂಡಲೇ ಪುನಃ ಜೆಇ ಕರೆ ಮಾಡಿ ತಿಳಿಸಿದೆ. ಸುಮಾರು 5 ನಿಮಿಷ ನಂತರ ಲೈನ್ ಅಪ್ ಮಾಡಲಾಯಿತು.

ನೀವೇ ಅಲ್ಲೇ ನಿಲ್ಲಿ 5 ನಿಮಿಷ ದಲ್ಲಿ ಲೈನ್ ಮ್ಯಾನ್ ಗಳನ್ನು ಕಳುಹಿಸುತ್ತೇನೆ ಎಂದು ಹೇಳಿದರೂ, ನಾನೂ ರಸ್ತೆಯಲ್ಲೇ ನಿಂತು ಬರುವ ವಾಹನ ಮತ್ತು ಪಾದಚಾರಿಗಳಿಗೆ ಜಾಗರೂಕತೆಯಿಂದ ಹೋಗಲು ಹೇಳಿ ಅಲ್ಲೇ ನಿಂತೆ. ಸುಮಾರು 15 ನಿಮಿಷ ನಂತರ ಲೈನ್ ಮ್ಯಾನ್ ಗಳ ಕಾಲ್ ಬಂತು. ಯಾವ ಸ್ಥಳ ನಾನೂ  ಸ್ಥಳದ ವಿಳಾಸ ಕೊಟ್ಟರೂ ಇವರು ಬರುದು ಕಾಣುತಿಲ್ಲ, ಪೊಲೀಸ್ ಇಲಾಖೆಗೆ ಕರೆ ಮಾಡಿದೆ ಕರೆ ಸ್ವೀಕಾರ ಮಾಡಲಿಲ್ಲ.

ಲೈನ್ ಮ್ಯಾನ್ ನವರಿಗೆ ಮಾಡಿದೆ ಇವರ ಉತ್ತರ ನಾವೂ ಎರೋಪ್ಲ್ಯಾನ್ ನಲ್ಲಿ ಬರುತ್ತಾ ಇಲ್ಲಾ, ನಮಗೆ ಅದೇ ಕೆಲಸ ಅಲ್ಲಾ, ಇವರ ಉತ್ತರ ಪುನಃ ಲೈನ್ ಆಪ್ ಆಗಿದೆ. ಅಲ್ಲಾ ನಿಮಗೆ ಏನೂ ಸಮಸ್ಯೆ ನಾನೂ ಹೇಳಿದೆ ತಂತಿ ನಡುರಸ್ತೆಯಲ್ಲಿ ಇದೆ. ವಾಹನ ಚಾಲಕರರಿಗೆ ಮತ್ತು ಪಾದಚಾರಿಗಳಿಗೆ ಗೊತ್ತಾಗುತಿಲ್ಲ ಯಾರ ಕುತ್ತಿಗೆ ಸಿಲುಕಬಹುದು ಅಂತಾ ಹೇಳಿದೆ.

ಸುಮಾರು ಅರ್ಧ ಗಂಟೆ ನಂತರ ಲೈನ್ ಮ್ಯಾನ್ ನವರೂ ಬಂದರು, ನಾನೂ ಆ ಕಡೆ ತಂತಿ ಸೈಡ್ ಗೆ ಹಾಕಿ ಅಂತಹ ಹೇಳಿದರೂ ಕೇರ್ ಲೆಸ್ ಮಾಡಿದರೂ ನಾನೂ ಸ್ವಲ್ಪ ಹೇರು ಧ್ವನಿಯಲ್ಲೇ ಹೇಳಿದ ಮೇಲೆ ತಂತಿಯನ್ನು ಬದಿಗೆ ಹಾಕಿದರು. ಆ ತಂತಿ ತುಂಡದನ್ನು ನಾನೂ ನೋಡಿ ನೋಡ ದಾಗೆ ಹೋಗುತ್ತಿದ್ದಾರೆ ಎಷ್ಟ್ಟು ಮಂದಿ ಗೆ ಅನಾಹುತ ಆಗುತಿತ್ತು.

ಎಲ್ಲರನ್ನು ಆ ಭಗವಂತನೇ ಕಾಪಾಡಿರಬೇಕು ನಾನೂ ಎಷ್ಟೋ ಬಾರಿ ಇಂತಹ ಘಟನೆ ಬಗ್ಗೆ ವಿದ್ಯುತ್ ಸರಬರಾಜು ಮಂಡಳಿ ಗೆ ಹೇಳಿದರು ಇವರ ನಿರ್ಲಕ್ಷ. ಎಲ್ಲಾ ವಿದ್ಯುತ್ ಸರಬರಾಜು ಮಂಡಳಿ ಸಿಬ್ಬಂದಿಗಳಲ್ಲಿ ವಿನಂತಿ ಯಾವುದೇ ಸ್ಥಳಗಳಲ್ಲಿ ಇಂತಹ ಸಮಸ್ಯೆ ಬಂದರೆ ಕೂಡಲೇ ಸ್ಪಂದನೆ ನೀಡಿ ಎಂದು ವಿನಂತಿ.