ಪುತ್ತೂರು: ಪುತ್ತೂರಿನಲ್ಲಿ ಭಾರೀ ಪ್ರಮಾಣದ ಭೂಕುಸಿತದ ಬಗ್ಗೆ ವರದಿಯಾಗುತ್ತಿದ್ದು, ಇದೀಗ ಭಾರೀ ಆತಂಕಕ್ಕೆ ಕಾರಣವಾಗಿದೆ. ಮಾಣಿ ಮೈಸೂರು ರಸ್ತೆಯಲ್ಲಿ ಭೂಕುಸಿತದ ಬಳಿಕ ಇದೀಗ ಪಡ್ನೂರಿನ ಬೇರಿಕೆ ಎಂಬಲ್ಲಿ ಭಾರೀ ಪ್ರಮಾಣದ ಗುಡ್ಡದ ಮಣ್ಣು ರಸ್ತೆಗೆ ಹರಿದು ಬಂದಿದೆ.
ಪುತ್ತೂರು ತಾ| ಬೇರಿಕೆ ಎಂಬಲ್ಲಿ ಈ ಘಟನೆ ನಡೆದಿದ್ದು. ಇಡೀ ಗುಡ್ಡವೇ ರಸ್ತೆಗೆ ಕುಸಿದ ಹಿನ್ನಲೆಯಲ್ಲಿ ರಸ್ತೆ ಸಂಪರ್ಕ ಕಡಿತವಾಗಿದೆ.
ಹೆಚ್ಚಾಗಿ ವಾಹನ ಸಂಚಾರ ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ. ಇನ್ನೂ ಗುಡ್ಡ ಭಾಗದಿಂದ ಹರಿಯುತ್ತಿರುವ ಕೆಸರು ಮಿಶ್ರಿತ ನೀರು ಹರಿಯುತ್ತಿರುವ ಕಾರಣ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

