ಮಂಗಳೂರು: ವಿನಾಶದ ಅಂಚಿನಲ್ಲಿರುವ ಅತೀ ಸೂಕ್ಷ ಬುಡಕಟ್ಟು ಸಮುದಾಯವೆಂದು ಸರಕಾರವೇ ಗುರುತಿಸಿರುವ ಕರಾವಳಿ ಕರ್ನಾಟಕದ ಮೂಲ ನಿವಾಸಿಗಳಾದ ಕೊರಗ ಸಮುದಾಯದ ಬಗ್ಗೆ ಸರಕಾರಿ ಆಡಳಿತದ ಮೋದಸಳೆ ಕಣ್ಣೀರು ಕೊನೆಯಾಗಬೇಕು.

ಕನಿಷ್ಟ ಪಕ್ಷ ಮಾನವೀಯ ಸಂವೇದನೆ ಮತ್ತು ಸಂವಿಧಾನದ ನಿರ್ದೇಶಾತ್ಮಕ ತತ್ವದ ಅಡಿಯಲ್ಲಿ ಕರ್ತವ್ಯ ನಿರ್ವಹಿಸುವ ಪ್ರಾಮಾಣಿಕ ಪ್ರಯತ್ನ ಇಂದಿನ ತುರ್ತು ಆವಶ್ಯಕತೆ ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹಸಂಚಾಲಕರಾದ ಡಾ,ಕೃಷ್ಣಪ್ಪ ಕೊಂಚಾಡಿಯವರು ಅಭಿಪೊರಾಯ ಪಟ್ಟರು. ಅವರು ಇಂದು ಮಂಗಳೂರು ಮಹಾನಗರ ಪಾಲಿಕೆಯ ಎದುರು ವಾಮಂಜೂರು ಮಂಗಳಜ್ಯೋತಿ ಎಂಬ ಪ್ರದೇಶದಲ್ಲಿ ಆದಿವಾಸಿ ಕೊರಗ ಸಮುದಾಯದ ನಿವೇಶನ ರಹಿತ ಕುಟುಂಬಗಳಿಗೆ ಗುರುತಿಸಲಾಗಿರುವ ಮನೆ ನಿವೇಶನ ಹಸ್ತಾಂತರ ಮತ್ತು ಭೂಮಿಯ ದಾಖಲೆಗಳನ್ನು ನೀಡುವ ಪ್ರಕ್ರಿಯೆಯು ಅನಗತ್ಯ ವಿಳಂಬ ಆಗುತ್ತಿರುವುದನ್ನು ವಿರೋಧಿಸಿ ಸಂಘಟನೆಯ ಸ್ಥಳೀಯ ಘಟಕ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದರು.

ಮುಂದುವರಿದು ಮಾತನಾಡಿದ ಅವರು ಕಳೆದ ಫೆಬ್ರವರಿಯಲ್ಲಿ ಚುನಾವಣೆಯ ದೃಷ್ಟಿಯಿಂದ ಕೇಂದ್ರ ಸರಕಾರ ಹಮ್ಮಿಕೊಂಡಿದ್ದ ಜನ್ ಮನ್ ಕಾರ್ಯಕ್ರಮದ ಸಮಯದಲ್ಲಿ ಜಿಲ್ಲೆಯ ಜಿಲ್ಲಾಧಿಕಾರಿಗಳೂ ಸೇರಿದಂತೆ, ಸರಕಾರದ ಎಲ್ಲಾ ಇಲಾಖೆಗಳು ಭಾರೀ ಪತ್ರಿಕಾ ಪ್ರಚಾರ ನಡೆಸಿ ಆದಿವಾಸಿ ಕೊರಗ ಸಮುದಾಯಕ್ಕೆ ಎಲ್ಲಾ ರೀತಿಯಿಂದಲೂ ಸೇವೆ ಸಲ್ಲಿಸಲು ಸಿದ್ದ ಎಂದು ಹೇಳಿಕೆ ನೀಡಿದ್ದರು. ಆದರೆ ವಾಸ್ತವವಾಗಿ ಮೂಲಭೂತ ಸಮಸ್ಯೆಯ ಬಗ್ಗೆ ಜಿಲ್ಲಾಧಿಕಾರಿ, ಮಂಗಳೂರು ಮಹಾನಗರ ಪಾಲಿಕೆ ಮತ್ತು ಐಟಿಡಿಪಿ ಇಲಾಖೆಗೆ ಮನವಿ ಸಲ್ಲಿಸದಾಗ ಅದಕ್ಕೆ ಕನಿಷ್ಟ ಪಕ್ಷ ಸ್ಪಂದನೆಯೇ ಇಲ್ಲದ ಸರ್ವಾಧಿಕಾರಿ ಪ್ರವೃತಿ ಜಿಲ್ಲೆಯಲ್ಲಿ ಇದೆ. ಮಂಗಳೂರು ಮಹಾನಗರ ಪಾಲಿಕೆಯಂತೂ ದಲಿತ ಮತ್ತು ಆದಿವಾಸಿ ಕೊರಗ ಸಮುದಾಯದ ವಿರುದ್ಧ ವ್ಯವಸ್ತೋತವಾಗಿ ಕೆಲಸ ಮಾಡುತ್ತಿದೆ. ಕಳೆದ ಐಸು µವರ್ಷಗಳಲ್ಲಿ ದಲಿತ ಮೀಸಲು ನಿಧಿಯಿಂದ ಹೊಸ ಮನೆ ನಿರ್ಮಾನ ಆಗಿರುವುದು ಕೇವಲ 65.ಈ ಮೊದಲಿನ ಕಾಂಗ್ರೆಸ್ಸು ಆಡಳಿತದ ಅವಧಿಯಲ್ಲಿ ವರ್ಷಕ್ಕೆ 60 ಮನೆಗಳು ನಿರ್ಮಾಣ ಆಗುತ್ತಿತ್ತು. ಮಹಾನಗರ ಪಾಲಿಕೆ ಕಠಿಣ ನಿಯಮಗಳನ್ನು ಅನುಸರಿಸಿರುವ ಕಾರಣ ಈ ಪರಿಸ್ಥಿತಿ ಉಂಟಾಗಿದೆ. ಅಧಿಕಾರಿಗಳ ಮತ್ತು ಆಡಳಿತದ ನಿಜವಾದ ಉದ್ದೇಶ ಆದಿವಾಸಿಗಳಿಗೆ ಮತ್ತು ದಲಿತರಿಗೆ ಮನೆ ನಿರ್ಮಿಸದಂತೆ ಮಾಡಿ ಅವರ ಅಭಿವೃದ್ಧಿ ಆಗದಂತೆ ತಡೆಯುವುದೇ ಆಗಿದೆ. ಈ ಧೋರಣೆಯ ಮುಂದುವರಿದ ಪರಿಣಾಮವಾಗಿಯೇ ಮೂಡಾ ಅನುಮೋದನೆ ನೀಡಿ ಎರಡು ತಿಂಗಳು ಕಳೆದರೂ ªನಿವೇಶನ ಮತ್ತು ಭೂದಾಖಲೆ ಹಂಚಿಕೆ ಕಾರಣವಿಲ್ಲದೆ ವಿಳಂಬ ಮಾಡುತ್ತಿದೆ. ಆದುದರಿಂದ ಮುಂದಿನ ಕಾಲಮಿತಿಯೊಳಗೆ ನಿವೇಶನ ಹಂಚಿಕೆ ಪ್ರಕ್ರಿಯೆ ನಡೆಯದೇ ಇದ್ದಲ್ಲಿ ಹೊಸ ಮಾದರಿಯ ಹೋರಾಟ ನಡೆಸುವುದು ಅನಿವಾರ್ಯ ಎಂದು ಅವರು ಎಚ್ಚರಿಸಿದರು.

ಪ್ರತಿಭಟನಾ ಸಭೆಯನ್ನು ಉದ್ಧೆಶಿಸಿ ಮಾತನಾಡಿದ ಘಟಕದ ಅಧ್ಯಕ್ಷರೂ ಹಿರಿಯರೂ ಆದ ಕರಿಯ.ಕೆ ಇವರು ಮಾತನಾಡುತ್ತಾ ಕಳೆದ ಮೂರು ತಲೆಮಾರುಗಳಿಂದ ಕುದ್ಮುಲ್ ರಂಗರಾಯರ ಶಿಷ್ಯ ವೆಂಕೋಜಿ ರಾವ್‍ರವರು ಕೊರಗ ಸಮುದಾಯದ ಜನರಿಗೆಂದೇ ನೀಡಿರುವ ತುಂಡು ಬೂಮಿಯನ್ನು ಪಡಯಲು ಮನವಿ ಮತ್ತು ಹೋರಾಟಗಳನ್ನು ಮಾಡುತ್ತಿದ್ದೇವೆ. ಕೊನೆಗೆ ಕಾನೂನಿನ ಎಲ್ಲಾ ಅಡಚ£ಣೆಗಳು ನಿವಾರಿಸಿ ಮೂಡಾ ದಿಂದ ಅನುಮೋದನೆ ಸಿಕ್ಕಿದರೂ ಕಲೆದ ಎರಡು ತಿಂಗಳಿನಿಂದ ಪ್ರತೀ ವಾರ ಕಚೇರಿಗೆ ಬೇಟಿ ನೀಡಿ ಒತ್ತಾಯಿಸಿ ಮನವಿ ಅರ್ಪಿಸಿದರೂ ಕಾರಣವಿಲ್ಲದೆ ವಿಳಂಬ ಆಗುತ್ತಿದೆ ಎಂದು ತಮ್ಮ ದೀರ್ಘ ಕಾಲದ ಅಳಲ್ಲನ್ನು ತೋಡಿಕೊಂಡರು .
ಕಾರ್ಮಿಕ ಸಂಘಟನೆಯ ಮುಂದಾಳಿ ಸುನೀಲ್ ಕುಮಾರ್ ಬಜಾಳ್ ಮಾತನಾಡಿ, ಮಂಗಳೂರು ಮಹಾನಗರ ಪಾಲಿಕೆ ಆದಿವಾಸಿ ಕೊರಗ ಸಮುದಾಯದ ಪಾಲೊಗೆ, ದಲಿತರ ಪಾಲಿಗೆ ಮತ್ತು ಶೋಷಿತ ಜನರ ಪಾಲಿಗೆ ದೊಡ್ಡ ಕಂಟಕ ಆಗಿದೆ. ಬಡವರ ರಕ್ತ ಹೀರುವ ಸಂಸ್ಥೆಯಾಗಿದೆ. ಮಹಾನಗರ ಪಾಲಿಕೆಯ ಅಧಿಕಾರಿಗಳು ಆಡಳಿತ ಪಕ್ಷ ಬಿಜೆಪಿ ಮತ್ತು ವಿಒರೋಧ ಪಕ್ಷ ಆಗಿರುವ ಕಾಂಗ್ರೆಸ್ಸು ಪರಸ್ಪರ ಜತೆಗೂಡಿ ದ್ವನಿ ಇಲ್ಲದವರ ಕತ್ತು ಹಿಸುಕಿ ಕೊಲೆಮಾಡುತ್ತಿದೆ ಎಂದು ಹೇಳಿದರು. ಅವರು ಬೀದಿ ಬದಿ ವ್ಯಾಪಾರೆಸ್ಥರ ಮೇಲೆ ನಡೆಸಿದ ಅಮಾನುಷ ದಾಳಿಯೇ ಮಹಾನಗರ ಪಾಲಿಕೆಯ ಮನಸ್ಥಿತಿಗೆ ಹಿಡಿದ ಕನ್ನಡಿ ಎಂದು ಹೇಳಿದರು.

ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಮಿತಿ ಸದಸ್ಯರಾದ ಶೇಖರ್ ವಾಮಂಜೂರುರವರು ಮಾತನಾಡುತ್ತ ಮಹಾನಗರ ಪಾಲಿಕೆಯ ಅಧಿಕಾರಿಗಳು ಕೊರಗ ಸಮುದಾಯದ ಪ್ರಜೆಗಳನ್ನು ತಿರಸ್ಕಾರದಿಂದ ವರ್ತಿಸಿ ಯಾವುದೇ ವಿವರಣೆ ನೀಡದೆ ಉಡಾಫೆಯಿಂದ ವರ್ತಿಸುತ್ತಿರುವುದನ್ನು ಖಂಡಿಸಿದರು.ರಾಜ್ಯ ಸಮಿತಿಯ ಸದಸ್ಯರಾದ ಕೃಷ್ಣಾ ಇನ್ನಾ ರವರು ಒಪ್ರತಿಭಟನಾರಾರರನ್ನು ಉದ್ಧೆಶಿಸಿ ಭಾಷಣ ಮಾಡಿದರು.

ಪ್ರಾರಂಭದಲ್ಲಿ ಆದಿವಾಸಿ ಸಂಘಟನೆಯ ಜಿಲ್ಲಾ ಮಾರ್ಗದರ್ಶಕರಾದ ಯೋಗಿಶ್ ಜಪ್ಪಿನಮೊಗರು ಪ್ರಾಸ್ತಾವಿಕವಗಿ ಮಾತನಾಡಿ ಕಾರ್ಯಕ್ರಮ ನಿರ್ವಹಿಸಿದರು. ಪ್ರತೀಭಟನೆಯ ನೇತ್ರತ್ವವನ್ನು ಝಿಲ್ಲಾ ಸಮಿತಿಯ ಮುಂದಾಳುಗಳಾದ ರವೀಂದ್ರ, ಪುನೀತ್ , ವಿಕಾಸ್ ವಾಮಂಜೂರು, ಮಂಜುಳಾ ಲಿಖಿತ್, ದಿನೇಶ್, ವಿಘ್ನೇಶ್, ಜಯ ಮಧ್ಯಪದವು, ಪ್ರಶಾಂತ್ ಕಂಕನಾಡಿ , ಮಂಜುಳಾ ಮೊದಲಾದವರು ವಹಿಸಿದ್ದರು. ಹೊರಾಟವನ್ನು ಬೆಂಬಲಿಸಿ ವಿವಿಧ ಪ್ರಗತಿಪರ ಸಂಘಟನೆಗಳ ನಾಯಕರುಗಳಾದ, ವಾಸುದೇವ ಉಚ್ಚಿಲ್, ಮನೋಜ್ ವಾಮಂಜೂರು, ಅಶೋಕ್ ಶ್ರೀಯಾನ್, ತಿಮ್ಮಯ್ಯ ಕೊಂಚಾಡಿ,ಗೀತಾ ದಡ್ಡಲ್ ಕಾಡ್,ದಯಾನಂಧ ಕೊಪ್ಪಲ್ ಕಾಡು ಮೊದಲಾದವರು ಭಾಗವಹಿಸಿದರು.