ಮಂಗಳೂರು : ಪುತ್ತೂರಿನ ಕೃಷ್ಣ ಜೆ. ರಾವ್ ಮದುವೆಯಾಗುವುದಾಗಿ ನಂಬಿಸಿ ಮಗು ಕರುಣಿಸಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಿ ಸಂಧಾನಕ್ಕೆ ಆರೋಪಿ ಪರ ವಕೀಲರು ಹೈಕೋಟ್‌ನಲ್ಲಿ ಪ್ರಸ್ತಾಪಿಸಿದ್ದು, ಜೂನ್ 19ರಂದು ರಾಜಿ ಮಧ್ಯಸ್ಥಿಕೆಯಲ್ಲಿ ಪ್ರಕರಣ ಸುಖಾಂತ್ಯಗೊಳ್ಳುವ ವಿಶ್ವಾಸವಿದೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಜ್ಯಾಧ್ಯಕ್ಷ ಕೆ.ಪಿ. ನಂಜುಂಡಿ ತಿಳಿಸಿದರು.

ಪ್ರಕರಣಕ್ಕೆ ಸಂಬಂಧಿಸಿ ಹೈಕೋಟ್‌ನಲ್ಲಿ ನಡೆದ ವಿಚಾರಣೆ ವೇಳೆ ಆರೋಪಿ ಕೃಷ್ಣ ರಾವ್ ಪರ ವಕೀಲ ಪಿ.ಪಿ. ಹೆಗ್ಡೆ ಅವರು, ಪ್ರಕರಣವನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲು ಸಿದ್ದ ಎಂದು ತಿಳಿಸಿದ ಹಿನ್ನೆಲೆಯಲ್ಲಿ ಸಂತ್ರ ಸ್ತೆಯ ಕುಂಟುಂಬಿಕರು ಹಾಗೂ ಆರೋಪಿಯ ಕುಟುಂಬಿಕರು ಜೂ.19ರಂದು ಮಧ್ಯಸ್ಥಿಕೆ ಕೇಂದ್ರಕ್ಕೆ ಹಾಜರಾಗಬೇಕು ಎಂದು ಹೈಕೋಟ್ ಸೂಚಿಸಿದೆ. ಮಧ್ಯಸ್ಥಿಕೆ ಬಳಿಕ ವಿಚಾರಣೆಯನ್ನು ಜೂ.30ಕ್ಕೆ ನಿಗದಿಪಡಿಸಲಾಗಿದೆ. ರಾಜಿ ಸಂಧಾನದ ಮೂಲಕ ಸಂತ್ರಸ್ತೆಗೆ ನ್ಯಾಯ ದೊರೆಯುವ ಭರವಸೆಯಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.

ಸಂತ್ರಸ್ತೆ ಹಾಗೂ ಮಗುವಿನ ಆರೈಕೆಗಾಗಿ ಆರೋಪಿ ಪಾವತಿಸಿರುವ, ಹೈಕೋರ್ಟ್‌ನಲ್ಲಿ ಠೇವಣಿ ಇಡಲಾದ 75000 ರೂ. ಮೊತ್ತವನ್ನು ಸಂತ್ರಸ್ತೆಗೆ ನೀಡಬೇಕು, ಎರಡನೇ ಕಂತಿನ ಹಣವನ್ನು ನಾಲ್ಕು ದಿನದ ಒಳಗೆ ಪಾವತಿಸಬೇಕು ಎಂ ಮ ಹೈಕೋರ್ಟ್ ಸೂಚನೆ ನೀಡಿದೆ. ಪ್ರಕರಣದಿಂದ ಎರಡೂ ಕುಟುಂಬಗಳು ತೊಂದರೆ, ಅವಮಾನ ಅನುಭವಿ ಸಿದ್ದು, ರಾಜಿ ಸಂಧಾನದ ಮೂಲಕ ಸಂತ್ರಸ್ತೆಯನ್ನು ಕೃಷ್ಣ ಜೆ. ರಾವ್ ಕುಟುಂಬಿಕರು ಮನೆ ತುಂಬಿಸಿ ಕೊಳ್ಳುವ ವಿಶ್ವಾಸವಿದೆ. ಸಂತ್ರಸ್ತೆಗೆ ಗಂಡ, ಮಗುವಿಗೆ ಅಪ್ಪ ಬೇಕು. ಈ ಹಿನ್ನೆಲೆಯಲ್ಲಿ ಜೂ. 17ರಂದು ನಿಗದಿಪಡಿಸಿದ್ದ ಮಗುವಿನ ನಾಮಕರಣವನ್ನು ಮುಂದೂಡಲಾಗಿದೆ ಎಂದು ತಿಳಿಸಿದರು.

ಈ ಪ್ರಕರಣಕ್ಕೆ ಸಂಬಂಧಿಸಿ ಹುಡುಗಿ ಹಾಗೂ ಹುಡುಗ ಸಮಾನವಾಗಿ ತಪ್ಪು ಎಸಗಿದ್ದಾರೆ. ರಾಜಿ ಸಂಧಾನಕ್ಕೆ ಮುಂದಾಗಿರುವ ಕೃಷ್ಣ ಜೆ. ರಾವ್ ಕುಟುಂಬಿಕರ ನಿರ್ಧಾರ ಸ್ವಾಗತಾರ್ಹ. ಇಂತಹಾ ಪ್ರಕರಣ ಯಾವುದೇ ಕುಟುಂಬದಲ್ಲಿ ಮುಂದಕ್ಕೆ ನಡೆಯಬಾರದು. ಈ ಬಗ್ಗೆ ವಿದ್ಯಾರ್ಥಿ ಜೀವನದಲ್ಲಿರುವ ಹುಡುಗ- ಹುಡುಗಿಯರು ಎಚ್ಚರ ವಹಿಸಬೇಕು ಎಂದರು.

ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಬೆಂಗಳೂರು ಇದರ ಪದಾಧಿಕಾರಿಗಳಾದ ಲಗ್ಗೆರೆ ರವಿಕುಮಾರ್, ಜನಾರ್ದನ ಆಚಾ‌ರ್, ಲೋಕೇಶ್ ತಿಟ್ಟಹಳ್ಳಿ, ಜಗದೀಶ್ ಪೀಣ್ಯ ಉಡುಪಿ ಘಟಕ ಉಪಾಧ್ಯಕ್ಷ ಗೋಪಾಲ್, ಗಂಗಾಧರ್ ಆಚಾರ್ ಉಪಸ್ಥಿತರಿದ್ದರು.

View this post on Instagram

A post shared by News Karnataka (@newskarnataka)