ಮಂಗಳೂರು : ಕೋಮು ಹತ್ಯೆ ವರದಿ ನೀಡಲು ಕೆಪಿಸಿಸಿ ನಿಯೋಗ ಭೇಟಿ ವಿಚಾರವಾಗಿ ಮಂಗಳೂರಿನಲ್ಲಿ ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್.ಸುದರ್ಶನ್ ಹೇಳಿಕೆ ನೀಡಿದ್ದಾರೆ. ನಾವು ಎಲ್ಲರ ಜೊತೆಗೆ ಸಮಾಲೋಚನೆ ಮಾಡಿದ್ದೇವೆ. ರಾಜ್ಯದ ಪ್ರಗತಿಗೆ ದ.ಕ ಜಿಲ್ಲೆಯ ಕೊಡುಗೆ ಬಹಳ ದೊಡ್ಡದಿದೆ. ಇತ್ತೀಚಿನ ಘಟನೆಗಳಿಗೆ ಕೋಮು ಬಣ್ಣ ಕೊಡುವ ಕೆಲಸಗಳು ಆಗ್ತಿದೆ ಎಂದರು.
ಯಾರೋ ದುಷ್ಕರ್ಮಿಗಳು 2% ಜನರು ದುಷ್ಕೃತ್ಯ ಎಸಗುತ್ತಿದ್ದಾರೆ. ಉಳಿದ 8% ಜನರು ಅದರ ಲಾಭವನ್ನು ಪಡೀತಿದ್ದಾರೆ. ಆದರೆ 90% ಜನರು ಯಾವುದರಲ್ಲೂ ಇಲ್ಲದವರಾಗಿದ್ದಾರೆ. ಹೀಗಾಗಿ ನಾವು ಇಲ್ಲಿನ ಅಧಿಕಾರಿಗಳ ಹಾದಿಯಾಗಿ ಎಲ್ಲರ ಜತೆ ಸಮಾಲೋಚನೆ ಮಾಡಿದ್ದೇವೆ. ನಾವು ಇನ್ನೂ ವರದಿ ಫೈನಲ್ ಮಾಡಿಲ್ಲ, ಉಡುಪಿ-ಉತ್ತರ ಕನ್ನಡ ಜಿಲ್ಲೆಗಳಿಗೂ ಹೋಗ್ತಾ ಇದೀವಿ ಎಂದರು.
ಅದರೆ ಅದಕ್ಕೂ ಮುನ್ನ ಸಿಎಂ, ಡಿಸಿಎಂ, ಕಾನೂನು ಸಚಿವರು, ಗೃಹ ಸಚಿವರ ಭೇಟಿಯಾಗ್ತೀವಿ. ಸೋಮವಾರ ಅಥವಾ ಮಂಗಳವಾರ ಮಧ್ಯಂತರ ವರದಿ ಸಲ್ಲಿಕೆ ಮಾಡ್ತೀವಿ. ಜಿಲ್ಲೆಯ ಸ್ಥಿತಿಗತಿ ಹಾಗೂ ಇತರೆ ವಿಷಯಗಳ ಬಗ್ಗೆ ವರದಿ ಸಲ್ಲಿಸ್ತೀವಿ. ಇನ್ನೊಂದಷ್ಟು ಮಾಹಿತಿ ಮತ್ತು ವಿಚಾರಗಳನ್ನು ಸಂಗ್ರಹ ಮಾಡಲಿದ್ದೇವೆ. ನಾವು ಪೂರ್ಣ ವರದಿ ತಯಾರಿಸಿ ಸರ್ಕಾರಕ್ಕೆ ವರದಿ ಕೊಡ್ತೇವೆ ಎಂದರು.

