ಮಂಗಳೂರು: ಇತ್ತೀಚಿಗೆ ಕೊಂಕಣಿ ಅಧ್ಯಯನ ಪೀಠ ಹಾಗೂ ಮಿಲಾಗ್ರಿಸ್ ಕಾಲೇಜು ಮಂಗಳೂರು, ಸಹಯೋಗದಲ್ಲಿ ಕೊಂಕಣಿ ಮಾನ್ಯತಾ ದಿನಾಚರಣೆ, ಮಿಲಾಗ್ರಿಸ್ ಕಾಲೇಜಿನಲ್ಲಿ ಆಚರಿಸಲಾಯಿತು. ಕಾರ್ಯಕ್ರಮದ ಉಧ್ಘಾಟನೆಯನ್ನು ಮಂಗಳೂರು ವಿಶ್ವವಿದ್ಯಾನಿಲಯ ಕುಲಪತಿಯವರಾದ ಪ್ರೊ. ಪಿ ಎಲ್. ಧರ್ಮ ಇವರು ನೆರವೇರಿಸಿದರು. ಶ್ರೀಯುತರು ಮಾತನಾಡುತ್ತಾ ಕೊಂಕಣಿ ವೈವಿದ್ಯತೆಯಿಂದ ಕೂಡಿದ ಭಾಷೆಯಾಗಿದೆ. ಕೊಂಕಣಿ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಇದನ್ನು ಉಳಿಸುವ ಹೊಣೆಗಾರಿಕೆ ವಿದ್ಯಾರ್ಥಿ ಸಮುದಾಯಕ್ಕೆ ಇದೆ ಎಂದು ಅಭಿಪ್ರಾಯ ಪಟ್ಟರು. Whatsapp Image 2024 08 20 At 3.22.01 Pm (6)

ಕಾರ್ಯಕ್ರಮದಲ್ಲಿ ಪ್ರಧಾನ ಅಥಿತಿಯಾಗಿ ವಿಧಾನ ಪರಿಷತ್ ಸದಸ್ಯರಾದ ಶ್ರೀಯುತ ಐವನ್ ಡಿಸೋಜ ಭಾಗವಹಿಸಿದ್ದರು. ಕೊಂಕಣಿಗೆ ಸರಕಾರದ ಮಟ್ಟದಲ್ಲಿ ಎಲ್ಲಾ ಪ್ರೋತ್ಸಾಹವನ್ನು ನೀಡುವ ಭರವಸೆಯನ್ನು ಅವರು ನೀಡಿದರು. ಕಾರ್ಯಕ್ರಮದಲ್ಲಿ ದ್ವಿತಿಯ ಬಾರಿಗೆ ವಿಧಾನ ಪರಿಷತ್ ಸಧಸ್ಯರಾಗಿ ಆಯ್ಕೆಯಾದ ಶ್ರೀಯುತ ಐವನ್ ಡಿಸೋಜರವರನ್ನು ಅಭಿನಂದಿಸಲಾಯಿತು. Photo 2024 08 20 13 35 34 (1) (2)
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ವಂ. ಗು. ಡಾ. ಮೈಕಲ್ ಸಂತುಮಾಯೊರ್ ರವರು ವಹಿಸಿದ್ದರು. ಅವರು ಮಾತನಾಡುತ್ತಾ ಕಾಲೇಜಿನಲ್ಲಿ ಎರಡನೇ ಭಾಷೆಯಾಗಿ ಕೊಂಕಣಿಯನ್ನು ಪ್ರೋತ್ಸಾಹಿಸುವಂತಹ ಎಲ್ಲಾ ಅವಶ್ಯಕತೆ ಇದೆ ಎಂದು ಅಭಿಪ್ರಾಯ ಪಟ್ಟರು. Whatsapp Image 2024 08 20 At 3.22.01 Pm (7)ಅದೇ ರೀತಿ ಡಾಕ್ಟರೇಟ್ ಪದವಿಯನ್ನು ಪಡೆದ ವಂ. ಗು. ಡಾ. ಮೈಕಲ್ ಸಂತುಮಾಯೊರ್ ರವರನ್ನು ಸನ್ಮಾನಿಸಲಾಯಿತು. Whatsapp Image 2024 08 20 At 3.22.01 Pm (4)ಮುಖ್ಯ ಅತಿಥಿಯಾಗಿ ಶ್ರೀಯುತ ರಾಯ್ ಕ್ಯಾಸ್ತಲಿನೊ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷರು ಭಾಗವಹಿಸಿದ್ದರು. ಕೊಂಕಣಿಯ ಬಗ್ಗೆ ಅಸ್ಮಿತೆಯನ್ನು ಪ್ರಕಟಿಸುವ ದಿನ ಕೊಂಕಣಿ ಮಾನ್ಯತಾ ದಿನಾಚರಣೆಯಾಗಿದೆ. ನಾವೆಲ್ಲರೂ ಒಂದಾಗಿ ಕೊಂಕಣಿ ಉಳಿವಿಗಾಗಿ ಶ್ರಮಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಶ್ರೀ ಗೋಕುಲದಾಸ್ ಪ್ರಭು, ಶ್ರೀಮತಿ ಪೂರ್ಣಿಮಾ ಸುರೇಶ್ ಹಾಗೂ ಶ್ರೀ ಪುಂಡಲಿಕಾ ಮರಾಠೆ ಅಥಿತಿಗಳಾಗಿ ಉಪಸ್ಥಿತರಿದ್ದರು. ಕೊಂಕಣಿ ಮಾನ್ಯತಾ ಸಂದೇಶವನ್ನು ನೀಡಿದರು. ಮಂಗಳೂರು ವಿಶ್ವವಿದ್ಯಾನಿಲಯ ಕೊಂಕಣಿ ಅಧ್ಯಯನ ಪೀಠದ ಸಂಯೋಜಕರಾದ ಡಾ. ಜಯವಂತ ನಾಯಕ್ ಇವರು ಪ್ರಸ್ತವಿಕ ಭಾಷಣವನ್ನು ಮಾಡಿದರು. ಅವರು ಮಾತನಾಡುತ್ತಾ ಕೊಂಕಣಿ ಅಧ್ಯಯನ ಪೀಠ ಶೈಕ್ಷಣಿಕವಾಗಿ ಕೊಂಕಣಿ ಭಾಷೆಯನ್ನು ಪ್ರೋತ್ಸಾಹಿಸುತ್ತದೆ ಎಂದರು. ಕಾರ್ಯಕ್ರಮದ ಸಂಯೋಜಕಿ ಕುಮಾರಿ ಟ್ರೆಸ್ಸಿ ಪಿಂಟೊರವರು ನೆರೆದಿರುವ ಎಲ್ಲರನ್ನು ಅಭಿನಂದಿಸಿದರು. Whatsapp Image 2024 08 20 At 3.22.01 Pm (5)

ಶ್ರೀಯುತ ಡೆನ್ಸಿಲ್ ಪಿಂಟೊರವರು ಕಾರ್ಯಕ್ರಮದ ನಿರ್ವಹಣೆಯನ್ನು ಮಾಡಿದರು. Whatsapp Image 2024 08 20 At 3.22.01 Pm (3)ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಕೊಂಕಣಿ ಸಾಂಸ್ಕ್ರತಿಕ ನೃತ್ಯ ಮತ್ತು ಗುಮ್ಮಟ್ ಗಾಯನ ಮನೋರಂಜನ ಕಾರ್ಯಕ್ರಮ ಪ್ರದರ್ಶಿಸಲಾಯಿತು.