ಮಂಗಳೂರು: ಮೂಲತಃ ಉಡುಪಿ- ಮಂಗಳೂರಿನವರಾದ ಶ್ರೀ ಕಿಶೋರ ಶೆಟ್ಟಿಯವರು ಕಳೆದ ಕೆಲವು ವರ್ಷಗಳಿಂದ ಯುಎಇಯಲ್ಲಿ ನೆಲೆಸಿದ್ದಾರೆ. ಅವರು ಯುಎಇ ಮತ್ತು ಭಾರತದಾದ್ಯಂತ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಮಾನವೀಯತೆ ಮತ್ತು ಸಮಾಜ ಸೇವೆಯನ್ನು ಮಾಡುತ್ತಿದ್ದಾರೆ.
ಇತ್ತೀಚೆಗೆ ಅವರು ತಮ್ಮ ಹುಟ್ಟುಹಬ್ಬದ ದಿನವಾದ ಅಕ್ಟೋಬರ್ 1 ರಂದು ಯುಎಇಯ ಗೋಲ್ಡನ್ ವೀಸಾ ಪಡೆದಿದ್ದಾರೆ. ಇದು ಅವರ ಜೀವನದಲ್ಲಿ ಒಂದು ಹೆಮ್ಮೆಯ ಕ್ಷಣ. ಬಡ ಕುಟುಂಬದಿಂದ ಬಂದ ಅವರಿಗೆ ದಿನಕ್ಕೆ ಒಂದು ಊಟ ಗಳಿಸುವುದೂ ಕಷ್ಟವಾಗಿತ್ತು. ಆದರೆ ತಮ್ಮ ಪರಿಶ್ರಮದಿಂದಾಗಿ ಮುಂಬೈ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ವಿಜ್ಞಾನದಲ್ಲಿ ಪದವಿ ಪಡೆದರು.

ಅವರು ತಮ್ಮ14 ನೇ ವರ್ಷ ವಯಸ್ಸಿನಲ್ಲೇ ಕೆಲಸ ಮಾಡಲು ಆರಂಭಿಸಿದರು, ಜತೆಗೆ ಅಧ್ಯಯನವನ್ನೂ ಮಾಡಿದರು. ಕಠಿಣ ಪರಿಶ್ರಮ ಮತ್ತು ಕೌಶಲ್ಯದಿಂದ ಬದುಕನ್ನು ಸ್ವರ್ಗವಾಗಿಸಿಕೊಂಡ ಅವರು 2019 ರಲ್ಲಿ ಯುಎಇಯಲ್ಲಿ ಗಿನ್ನೆಸ್ ವಿಶ್ವ ದಾಖಲೆ ಸೃಷ್ಟಿಸಿದರು. ದೇವರು ಅವರಿಗೆ ಇನ್ನೂ ಹೆಚ್ಚಿನ ಕೀರ್ತಿಯನ್ನು ತಂದುಕೊಡಲಿ. ಜೀವನದಲ್ಲಿ ಎರಡನೇ ಟಾಟಾ ಆಗಲು ಅವರು ಬಳಸುವ ಧ್ಯೇಯವಾಕ್ಯ; “ಒಟ್ಟಿಗೆ ನಡೆಯಿರಿ, ಒಟ್ಟಿಗೆ ಬೆಳೆಯಿರಿ”.

