ಮಂಗಳೂರು : ಹಿಂದೂ ಕಾರ್ಯಕರ್ತ ನುಹಾನ್ ಶೆಟ್ಟಿ ಹತ್ಯೆ ಪ್ರಕರಣ ನಂಬಂಧಪಟ್ಟಂತೆ ಮಂಗಳೂರಿನಲ್ಲಿ ಜಿಲ್ಲಾ ಬಿಜೆಪಿ ಸುದ್ದಿಗೋಷ್ಠಿ ನಡೆಸಿದೆ. ಈ ವೇಳೆ ಮಾತಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಯು.ಟಿ.ಖಾದರ್ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಫಾಝಿಲ್ ಕುಟುಂಬದ ಜೊತೆ ಖಾದರ್ ಸಂಬಂಧ ಹೊಂದಿದ್ದಾರೆ. ಬಂಧನವಾಗುವ ಮೊದಲೇ ಆರೋಪಿಗಳಿಗೆ ಕ್ಲೀನ್ ಚಿಟ್ ಕೊಟ್ಟಿದ್ದಾರೆ. ಯು.ಟಿ.ಖಾದರ್ ಗೆ ಹತ್ಯೆ ಬಗ್ಗೆ ಅಷ್ಟು ಕಾಳಜಿ ಯಾಕೆ ಎಂದು ಪ್ರಶ್ನಿಸಿದ್ದಾರೆ.
ಇಬ್ಬರು ಹಿಂದೂಗಳನ್ನು ಹಿಡಿದಿದ್ದಾರೆ. ಈ ಬಗ್ಗೆ ಕೂಲಂಕಷ ತನಿಖೆಯಾಗಬೇಕು. ಅಪರಾಧಿಗಳ ಜೊತೆ ಡಿನ್ನರ್ ಪಾರ್ಟಿ ಆಗಿದೆ. ಬಂಧಿತ ಇಬ್ಬರು ಹಿಂದೂ ಹುಡುಗರು ಮುಸ್ತಫಾ ಕೈ ಕೆಳಗೆ ಕೆಲಸ ಮಾಡುವವರು. ಮೊಹಮ್ಮದ್ ಮುಸ್ತಫಾ ಆಯೋಜಿಸಿದ್ದ ಕ್ರಿಕೆಟ್ ಗೆ ಖಾದರ್ ಹೋಗಿದ್ದಾರೆ. ಹತ್ಯೆಯಲ್ಲಿ ಮೊಹಮ್ಮದ್ ಮುಸ್ತಧಾನ ಪಾತ್ರವೇನು? ಎಂದು ಪ್ರಶ್ನಿಸಿದ್ದಾರೆ.
8 ಜನರ ಬಗ್ಗೆ ಮಾತ್ರ ಪೊಲೀಸರು ಮಾಹಿತಿ ನೀಡಿದ್ದಾರೆ. ಉಳಿದವರ ಬಗ್ಗೆ ಯಾಕೆ ಮಾಹಿತಿ ನೀಡುತಿಲ್ಲ? ಈ ತನಿಖೆಯಲ್ಲಿ ನ್ಯಾಯ ಸಿಗುವ ನಂಬಿಕೆ ಇಲ್ಲ. ಪ್ರಕರಣದ ಬಗ್ಗೆ ಎನ್ಐಎ ತನಿಖೆಯಾಗಬೇಕು. ಕೇವಲ 5 ಲಕ್ಷದ ಡೀಲ್ ಅಲ್ಲ, ದೊಡ್ಡ ಮಟ್ಟದ ಡೀಲ್ ಆಗಿದೆ. ಈ ಪ್ರಕರಣದ ಬಗ್ಗೆ ಹಲವು ಅನುಮಾನಗಳಿವೆ. ಪೊಲೀಸ್ ಇಲಾಖೆ ಮೇಲೆ ನಂಬಿಕೆಯಿಲ್ಲ. ಪೊಲೀಸ್ ಇಲಾಖೆಗೆ ಒತ್ತಡ ಹಾಕುವ ಖಾದರ್ ರಾಜೀನಾಮೆ ನೀಡಲಿ ಎಂದು ಅವರು ಆಗ್ರಹಿಸಿದ್ದಾರೆ.

