ಮಂಗಳೂರು: ಕೇರಳ ಕಾಸರಗೋಡಿನ ನೀಲೇಶ್ವರಂನ ಅಂಜೂಟ್ಟಂಬಳಂ ವೀರರ್ ಕಾವು ತೆಯ್ಯಂ ಕಟ್ಟೆ ಮಹೋತ್ಸವದ ವೇಳೆ ಭಾರಿ ಸ್ಫೋಟ ಸಂಭವಿಸಿದ್ದು, ಈ ದುರಂತದಲ್ಲಿ 24 ಗಾಯಾಳುಗಳು ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಗಂಭೀರ ಗಾಯಗೊಂಡ 21 ಗಾಯಾಳುಗಳು ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಪೈಕಿ ತೀರ ಗಂಭೀರ ಸ್ಥಿತಿಯಲ್ಲಿರುವ ಐವರಿಗೆ SICU ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳೂರಿನ ಎಜೆ ಆಸ್ಪತ್ರೆ ಮುಂಭಾಗ ಕುಟುಂಬಸ್ಥರ ಅಳಲು ತೋಡಿಕೊಂಡಿದ್ದಾರೆ. ಪರವಾನಿಗೆ ಇಲ್ಲದೆ ಪಟಾಕಿ ಶೇಖರಿಸಿದ್ದಾರೆ ಎಂದು ಆರೋಪ ಕೇಳಿಬಂದಿದೆ.
ಯಾವುದೇ ಅನುಮತಿ ಪಡೆಯದೇ ಪಟಾಕಿ ಸಿಡಿಸಿದ್ದಾಗಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ಒಂದು ಗೋದಾಮಿನಲ್ಲಿ ಪಟಾಕಿ ಶೇಖರಿಸಿಟ್ಟಿದ್ದರು. ಅದೇ ಗೋದಾಮಿನ ಬಳಿ ಜನರು ನಿಂತಿದ್ದರು. ಪಟಾಕಿಯ ಕಿಡಿ ಗೋದಾಮಿಗೆ ಬಿದ್ದು ಹಿನ್ನಲೆ ಬಾರಿ ದುರಂತ ಸಂಭವಿಸಿದೆ. ತುಂಬಾ ಗಂಭೀರ ಸ್ಥಿತಿಯಲ್ಲಿರುವ ಗಾಯಾಳುಗಳು ಮಂಗಳೂರು ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.

