ಮಂಗಳೂರು: ಇಂದು ನೈಋತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಪರಿಷತ್ ಚುನಾವಣೆ ನಡೆಯಲಿದೆ. ಇಂದು ಬೆಳಗ್ಗೆ 8ರಿಂದ ಮತದಾನ ಆರಂಭವಾಗಲಿದ್ದು, ದ.ಕ. ಜಿಲ್ಲೆಯಲ್ಲಿ ಒಟ್ಟು 16 ಕಡೆಗಳಲ್ಲಿ ಮತದಾನ ಕೇಂದ್ರ ತೆರೆಯಲಾಗಿದೆ. ಪದವೀಧರರ ಕ್ಷೇತ್ರದಲ್ಲಿ 24, ಶಿಕ್ಷಕರ ಕ್ಷೇತ್ರಕ್ಕೆ ಎಲ್ಲ ತಾಲೂಕು ಕಚೇರಿಗಳಲ್ಲಿ ಸೇರಿ 16 ಕಡೆಗಳಲ್ಲಿ ಮತದಾನ ಕೇಂದ್ರ ವಿದೆ.
ದ.ಕ. ಜಿಲ್ಲೆಯ ಪಧವೀಧರ ಕ್ಷೇತ್ರದಲ್ಲಿ 8,375 ಪುರುಷ ಹಾಗೂ 11,596 ಮಹಿಳೆ ಸಹಿತ ಒಟ್ಟು 19,971 ಮತದಾರರಿದ್ದಾರೆ. ಶಿಕ್ಷಕ ಕ್ಷೇತ್ರದಲ್ಲಿ 2,650 ಪುರುಷ ಹಾಗೂ 5,539 ಮಹಿಳೆ ಸೇರಿದಂತೆ ಒಟ್ಟು 8,189 ಮತದಾರರು ಇದ್ದಾರೆ.
ಕಾಂಗ್ರೆಸ್ ಹಾಗು ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ ಪ್ರತಿಷ್ಠೆಯ ಕಣವಾಗಿರುವ ಪರಿಷತ್ ಅಖಾಡವಾಗಿದೆ. ಪದವೀಧರ ಕ್ಷೇತ್ರದಲ್ಲಿ 10 ಅಭ್ಯರ್ಥಿಗಳಿಂದ ಸ್ಪರ್ಧೆ ನಡೆಯುತ್ತಿದೆ.
ಇತ್ತ ಶಿಕ್ಷಕರ ಕ್ಷೇತ್ರದಲ್ಲಿಯೂ ಬಂಡಾಯದ ಬಿಸಿಯೊಂದಿಗೆ ಒಟ್ಟು 8 ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ.

