ಮಂಗಳೂರು: ಕಾಂತಾರ ನಿರ್ಮಾಪಕ  ವಿಜಯ್ ಕಿರಗಂದೂರು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ‌ ಭೇಟಿ ನೀಡಿದರು.

ದುರ್ಗಾಪರಮೇಶ್ವರಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಕಾಂತಾರ ಚಿತ್ರದ ಯಶಸ್ವಿ ಹಿನ್ನಲೆಯಲ್ಲಿ ಕಟೀಲು ಕ್ಷೇತ್ರಕ್ಕೆ ಭೇಟಿ ನೀಡಲಾಯಿತು.

ಸ್ನೇಹಿತರೊಂದಿಗೆ  ವಿಜಯ್ ಕಿರಗಂದೂರು ಭೇಟಿ ನೀಡಿದರು. ಕ್ಷೇತ್ರದಲ್ಲೇ ವಿಜಯ್ ಕಿರಗಂದೂರು ಅನ್ನ ಪ್ರಸಾದ ಸ್ವೀಕರಿಸಿದರು.