ಮಂಗಳೂರು: ನೂತನ ಜಿಲ್ಲಾಧಿಕಾರಿ ಕಛೇರಿ ಪಡೀಲಿನಲ್ಲಿ ಆರಂಭಗೊಂಡಿದೆ‌ ಆದರೆ ಪಡೀಲು-ಬಜಾಲ್ ಸಂಪರ್ಕ ರಸ್ತೆಯ ಕಂಕನಾಡಿ ರೈಲ್ವೇಯ ಅಂಡರ್ ಪಾಸ್ ಬಳಿ ಅದೆಷ್ಟೋ ವರುಷದ ಸಮಸ್ಯೆಗೆ ಇನ್ನೂ ಕೂಡಾ ಮೋಕ್ಷ ಪ್ರಾಪ್ತಿಯಾಗದಿರುವುದು ವಿಪರ್ಯಾಸದ ಸಂಗತಿ.

ಇದು ಪಡೀಲಿನಿಂದ ಬಜಾಲ್ ಗೆ ಸಂಪರ್ಕವಾಗುವ ರಸ್ತೆಯ ಅಂಡರ್ ಪಾಸ್ ಇಲ್ಲಿ ಬುಧವಾರ ಕಂಡಂತಹ ದೃಶ್ಯ. ದಿನ ನಿತ್ಯ ಕೆಲಸಕಾರ್ಯಗಳಿಗೆ ತೆರಳುವ ಅದೆಷ್ಟೋ ಮಂದಿಯ ವಾಹನಗಳು ಮಳೆನೀರು ನಿಂತು ವಾಹನದ ಬಾನೆಟ್ ವರೆಗೆ ಬರುತ್ತಿದೆ.

ವಾಹನಗಳನ್ನು ಕೆಸರು ನೀರಿನಲ್ಲಿ ಚಲಾಯಿಸಿ ನೀರಲ್ಲೆ ಬಂದ್ ಅಗುತ್ತಿದೆ. ಕೆಸರು ನೀರಿನಲ್ಲಿ ನಿಲ್ಲುವ ಸ್ಥಿತಿ, ಭಯದಿಂದ ವಾಹನ ಮುಂದೇ ಸಾಗದೆ ತಿರುಗಿ ಬರುತ್ತಿದೆ. ದ್ವಿಚಕ್ರ , ಆಟೋಗಳು ಜನರು ಸುರಕ್ಷಿತವಾಗಿ ಸಂಚರಿಸಬೇಕಾದ ಪುಟ್ ಫಾತ್ ಮೇಲೆನೆ ಸಾಗಿ ಹೋಗುತ್ತಿದ್ದರೂ ಇತರ ವಾಹನಗಳು ಪೇಚುಮೊರೆ ಹಾಕಿ ರಿಟರ್ನ್ಸ್ ಹೋಗುತ್ತಿದೆ. ಇಲ್ಲಿನ ಶಾಶ್ವತ ಪರಿಹಾರಕ್ಕೆ ಏನಾದರೂ ಕ್ರಮ ಜಿಲ್ಲಾಡಳಿತ, ರೈಲ್ವೇ ಇಲಾಖೆ ಕ್ರಮಕೈಗೊಳ್ಳಬೇಕು. ಸುರಕ್ಷಿತ, ಮುಕ್ತ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕಾಗಿದೆ.