ಮಂಗಳೂರು : ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತ ಬಾಲಕರ ಅಡ್ಡಾದಿಡ್ಡಿ ಚಾಲನೆ ಹೆಚ್ಚಾಗುತ್ತೆಯಿದ್ದು ಪೋಷಕರು ಗಮನಹರಿಸದೆ ಇರುವುದು ಮುಖ್ಯ ಕಾರಣವಾಗಿದೆ. ಅದರಂತೆಯೇ ಅಪ್ರಾಪ್ತ ಬಾಲಕನಿಗೆ ದ್ವಿಚಕ್ರಮೋಟಾರ್ ವಾಹನವನ್ನು ಚಾಲನೆ ಮಾಡಲು ಕೊಟ್ಟಂತ ಮಾರುತಿ ಕಂಬಾಲ್ ಇವರಿಗೆ ಮಾನ್ಯ ಜೆಎಂಎಫ್‌ಸಿ 4 ನ್ಯಾಯಾಲಯದ ಪ್ರಭಾರ ನ್ಯಾಯಾಧೀಶೆ ಶಿಲ್ಪ ಎಸ್ ಬ್ಯಾಡಗಿ ಇವರು ಒಟ್ಟು 29,000 ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಈ ಅಪ್ರಾಪ್ತ ಬಾಲಕರು ಒಂದು ದ್ವಿಚಕ್ರ ವಾಹನದಲ್ಲಿ ನಾಲ್ವರೊಂದಿಗೆ ಚಲಿಸುತ್ತಿರುವ ಫೋಟೊ ಪತ್ತೆಯಾಗಿದ್ದು ಬಳಿಕ ಪ್ರಕರಣ ದಾಖಲಾಗಿತ್ತು. ಇದೀಗ ನ್ಯಾಯಾಲಯ ವಾಹನದ ಮಾಲಿಕರಿಗೆ ದೊಡ್ಡ ಮೊತ್ತದ ದಂಡವಿಧಿಸಿರುವುದು ಇತರ ಯುವ ಸವಾರರಿಗೆ ದಿಗಿಲುಬಡಿದಂತಾಗಿದೆ.

