ಮಂಗಳೂರು : ಈ ಹಿಂದಿನ ನಿಗದಿಯಂತೆ ಕಾಮಗಾರಿ ವೇಗ ನೀಡಿ ಮಳೆಗಾಲ ಆರಂಭವಾಗುತ್ತಿದ್ದಂತೆ ವಾಹನ ಸಂಚಾರಕ್ಕೂ ಮುಕ್ತ ಗೊಳಿಸುವ ಯೋಗಿವೆ ಸಿದ್ಧಪಡಿಸಲಾಗಿತ್ತು, ಆದರೆ ಕಾಮಗಾರಿ ವೇಳೆ ನೆಲದಡಿಯಲ್ಲಿ ಬಂಡೆ ಕಾಣಿಸಿಕೊಂಡಿರುವ ಕಾರಣ ಕಾಮಗಾರಿಗೆ ಹಿನ್ನಡೆ ಉಂಟಾಗಿದೆ.
ಸದ್ಯ ಕಾಮಗಾರಿಯನ್ನ ಊರ್ಣಗೊಳಿಸಲಾಗಿದೆ ಮಳೆ ನೀರು ಹರಿಯಲು ಸೂಕ್ತ ಚರಂಡಿ ಕಾಮಗಾರಿ ಪ್ರಗತಿಯಲ್ಲಿದ್ದು, ಮಂಗಳೂರು ಸ್ಮಾರ್ಟ್ ಸಿಟಿ ವತಿಯಿಂದ ರಸ್ತೆ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಜಪ್ಪಿನಮೊಗರು ರಾಷ್ಟ್ರೀಯ ಹೆದ್ದಾರಿ ಕಡೆಯ ಒಂದು ಪಥ ರಸ್ತೆಯ ಕಾಮಬರಿಯನ್ನು ಪೂರ್ಣಗೊಳಿಸಲಾಗಿದೆ.
ಸ್ಮಾರ್ಟ್ ಸಿಟಿ ಯೋಜನೆಯ ರೈಲ್ವೆ ಕೆಲನಿರ್ಮಣ ಕಾಮಗಾರಿ ೨೦೨೨ ಡಿಸೆಂಬರ್ನಲ್ಲಿರಲ್ಲಿ ಆರಂಭವಾಗಿದ್ದು ಒಂದು ವರ್ಷದಲ್ಲಿ ಮುಗಿಯುವ ನಿರೀಕ್ಷೆ ಇತ್ತು , ಕಾಮಗಾರಿಯು ವಿಳಂಬಗತಿಯಲ್ಲಿ ಸಾಗಿದ ಕಾರಣ ಸುಮಾರು ಮೂರು ವರ್ಷ ಸಮೀಪಿಸುತ್ತಿದ್ದರೂ ಕೆಲಸ ಇನ್ನೂ ಪೂರ್ಣಗೊಂಡಿಲ್ಲ. ಕ್ಲಿಷ್ಟಕರ ಕಾಮಗಾರಿಯಾಗಿರುವ ಕಾರಣ, ರೈಲುಗಳು ವೇಗದ ಮಿತಿಯನ್ನು ಕಡಿಮೆ ಮಾಡಿಯೇ ಸಂಚಾರ ನಡೆಸುತ್ತಿದೆ.
ಇಲ್ಲಿನ ರೈಲ್ವೇ ಅಂಡರ್ ಪಾಸ್ ಕಾಮಗಾರಿಯಿಂದಾಗಿ ಕೆಲವು ವರ್ಷಗಳಿಂದ ವಾಹನ ಸಂಚಾರ ಸ್ಥಗಿತಗೊಂಡಿದೆ. ಅಲ್ಲೇ ಪಕ್ಕದಲ್ಲಿ ದ್ವಿಚಕ್ರ ವಾಹನಗಳು ಸಾಗುವ ಕಿರಿದಾದ ಮಾರ್ಗವಿದ್ದು, ಅದರ ಮಧ್ಯ ಭಾಗದಲ್ಲಿ ಉಂಟಾಗಿರುವ ಹೊಂಡದಿಂದಾಗಿ ಅಪಾಯ ಎದುರಾಗಿದೆ. ಕೆಲವು ವರ್ಷಗಳಿಂದ ಈ ರಸ್ತೆಯ ತಿರುವು ಪ್ರದೇಶವೊಂದರಲ್ಲಿರುವ ಹೊಂಡ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.
ಕಿರಿದಾದ ಹಾಗೂ ಇಕ್ಕಟ್ಟಿನ ಓಣಿ ರಸ್ತೆಯಾಗಿರುವುದರಿಂದ ಬೆಳಗ್ಗೆ ಸಂಜೆ ಹೊತ್ತು ಅತೀ ಹೆಚ್ಚು ಸಂಖ್ಯೆಯಲ್ಲಿ ದ್ವಿಚಕ್ರ ವಾಹನಗಳು ಸಾಗುವುದರಿಂದ ದಟ್ಟಣೆ ಉಂಟಾಗುತ್ತಿದೆ. ಲೆವೆಲ್ ಕ್ರಾಸಿಂಗ್ನಲ್ಲಿ ಗೇಟ್ ಹಾಕುವುದರಿಂದ ದಟ್ಟಣೆಯೂ ಇರುತ್ತದೆ.
ರೈಲ್ವೇ ಕೆಳ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿ ಸ್ಮಾರ್ಟ್ ಸಿಟಿಯಿಂದ 30.7 ಕೋಟಿ ರೂ. ಮೊತ್ತವನ್ನು ರೈಲ್ವೇ ಇಲಾಖೆಗೆ ಪಾವತಿ ಮಾಡಲಾಗಿದೆ. ರೈಲ್ವೇ ಇಲಾಖೆಯೇ ಟೆಂಡರ್ ಕರೆದು ಕಾಮಗಾರಿ ನಡೆಸುತ್ತಿದೆ. ಸುಮಾರು 20 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣ ಹಾಗೂ ಉಳಿದ ಹಣದಲ್ಲಿ ಸಂಪರ್ಕ ರಸ್ತೆಗಳ ನಿರ್ಮಾಣವಾಗಲಿದೆ. ಸೇತುವೆಯ ಎರಡೂ ಭಾಗಗಳಲ್ಲಿ ಸ್ಮಾರ್ಟ್ಸಿಟಿಯಿಂದ ಈಗಾಗಲೇ ಕಾಂಕ್ರೀಟ್ ಚತುಷ್ಪಥ ರಸ್ತೆ ನಿರ್ಮಾಣ ಮಾಡಲಾಗಿದೆ.

