ಮಂಗಳೂರು: ವಿದೇಶ ಪ್ರವಾಸದಲ್ಲಿದ್ದ ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜ ರವರು ನಿನ್ನೆ ಮಂಗಳೂರಿಗೆ ಆಗಮಿಸಿದ್ದು ಮೇ 02 ರಂದು ರಾತ್ರಿ 3-30 ಗಂಟೆಗೆ ಅಡ್ಯಾರ್ ನಲ್ಲಿ ದುಷ್ಕರ್ಮಿಗಳು ಕಣ್ಣೂರಿನ ನಿವಾಸಿ ನೌಶಾದ್ ಎಂಬವರಿಗೆ ಚೂರಿ ಹಾಕಿ ಗಂಭೀರ ಗಾಯಗೊಂಡು ನಗರದ ಯುನಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರನ್ನು ಭೇಟಿ ಮಾಡಿದರು.

ನೌಶಾದ್ ಅವರ ಆರೋಗ್ಯ ವಿಚಾರಿಸಿ, ಕುಟುಂಬಸ್ಥರಿಗೆ ಧೈರ್ಯ ತುಂಬಿದರು ಮತ್ತು ಸರಕಾರದಿಂದ ಸಿಗುವ ಪರಿಹಾರವನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ ಕೂಡಲೇ ಒದಗಿಸುವಂತೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಮೇಯರ್ ಅಶ್ರಫ್ ಬಂದರ್, ಇಮ್ರಾನ್ ಕುದ್ರೋಳಿ, ಸಲೀಂ ಮಕ್ಕ, ಸಲೀಹ್ ಬಜ್ಪೆ, ನವಾಜ್ ಜೆಪ್ಪು, ಹಬೀಬುಲ್ಲಾ ಕಣ್ಣೂರು, ಮಾಜಿ ಮನಪಾ ಸದಸ್ಯರು ಬಾಸ್ಕರ್ ರಾವ್, ನಜೀರ್ ಬಜಾಲ್ ಹಾಗೂ ಇತರರು ಉಪಸ್ಥಿತರಿದ್ದರು.