ಮಂಗಳೂರು : ಸಿದ್ದರಾಮಯ್ಯರನ್ನ ಸಿ.ಡಿ ಕೇಸ್ ನಲ್ಲಿ ಸಿಕಾಕಿಸಿದ್ದು ಕಾಂಗ್ರೆಸ್, ಅದನ್ನ ಸ್ವತಃ ಅವರ ಮಗನೇ ಹೇಳಿಕೊಂಡು ಬರ್ತಾ ಇದಾರೆ. ಹಾಗಾಗಿ ಈ ಬಾರಿ ಕಾಂಗ್ರೆಸ್ ಗೆಲ್ಲಲ್ಲ, ಮತ್ತೇ ಬಿಜೆಪಿ ಸರ್ಕಾರ ಬರುತ್ತೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಮಂಗಳೂರಿನಲ್ಲಿ ಹೇಳಿದ್ದಾರೆ.
ಸ್ಟಿಂಗ್ ಕೇಸ್ ನಲ್ಲಿ ಎಲ್ಲರಿಗೂ ಕ್ಲೀನ್ ಚಿಟ್ ಕೊಡ್ತಾರೆ. SIT ರಚನೆ ಮಾಡಿದ್ದೇ ಅದಕ್ಕೆ.ಯಾರು ಇದ್ದಾರೂ ಅವರಿಗೆ ಕ್ಲೀನ್ ಚಿಟ್ ಕೊಟ್ಟೇ ಕೊಡ್ರಾರೆ, ಎಸ್ಐಟಿ ಕೊಡುತ್ತೆ. ಈಗ ಸಿದ್ದರಾಮಯ್ಯ ಮೂಲೆಗುಂಪು, ಅವರು ಊಟದ ಕರಿಬೇವಿನ ಸೊಪ್ಪಿನ ಥರ ಆಗಿದ್ದಾರೆ. ಹಾಗಾಗಿ ಅವರು ಡಿಕೆಶಿಯನ್ನ ಇಳಿಸಲು ಸಿದ್ದರಾಮಯ್ಯ ಪ್ಲಾನ್ ಮಾಡ್ತಾ ಇದಾರೆ ಎಂದರು.
ಹಾಗಾಗಿ ಕರ್ನಾಟಕಕ್ಕೆ ಮೂರನೇ ಮುಖ್ಯಮಂತ್ರಿ ಬರಬಹುದು. ಅವರಲ್ಲಿ ಗಲಾಟೆ ಆಗ್ತಾ ಇದೆ, ಸಿದ್ಧರಾಮಯ್ಯ ಮತ್ತು ಡಿಕೆಶಿ ಮಧ್ಯೆ ಗಲಾಟೆ ಆಗ್ತಾ ಇದೆ. ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ, ಅವರು ಬೆಲೆ ಏರಿಕೆ ಮಾಡ್ತಾ ಇದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.

