ಪುತ್ತೂರು: ಉಪ ವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ವಿರುದ್ಧ ನಡೆಸುತ್ತಿದ್ದ ಪ್ರತಿಭಟನೆಯನ್ನು ಹಿಂಜಾವೇ ಹಿಂಪಡೆದಿದೆ. ಸಂಜೀವ ಪೂಜಾರಿಯನ್ನ ಸಂಜೆಯ ಒಳಗಡೆ ಬಂಧಿಸುವಂತೆ ಪುತ್ತೂರು ಡಿವೈಎಸ್ಪಿ ಅರುಣ್ ನಾಗೇಗೌಡ ಭರವಸೆ ನೀಡಿದರು.
ಈ ಹಿನ್ನೆಲೆ ಹಿಂಜಾವೇ ಪ್ರತಿಭಟನೆಯನ್ನ ಹಿಂಪಡೆದರು. ಇಂದು ಸಂಜೆಯೊಳಗಡೆ ಬಂಧಿಸದಿದ್ರೆ ನಾಳೆ ಹಿಂದೂ ಸಂಘಟನೆಗಳ ಸಭೆ ಕರೆದು ಮುಂದಿನ ನಿರ್ಧಾರ ಕೈಗೊಳ್ಳಲಿದೆ. ಮುಂದಕ್ಕೆ ಆಗುವ ಘಟನೆಗಳಿಗೆ ಪೊಲೀಸರೇ ಹೊಣೆಯಾಗಲಿದ್ದಾರೆ. ಸ್ವಯಂ ಪ್ರೇರಿತ ಪುತ್ತೂರು ಬಂದ್ ಗೆ ಕರೆ ಕೊಡುವ ಸಾಧ್ಯತೆ ಇದೆ ಎಂದು ಹಿಂದೂ ಜಾಗರಣ ವೇದಿಕೆ ಮುಖಂಡ ನರಸಿಂಹ ಮಾಣಿ ಹೇಳಿಕೆ ನೀಡಿದ್ದಾರೆ.

