ಮಂಗಳೂರು: ಹಿಂದುತ್ವದ ಪರವಾಗಿ ಕೆಲಸ ಮಾಡುತ್ತಿದ್ದ ಸುಹಾಸ್ ಶೆಟ್ಟಿಯನ್ನು ದರೋಡೆಕೋರನೆಂದು ಬಿಂಬಿಸಿದ್ದು ಸರಿಯಲ್ಲ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದ್ದಾರೆ.

ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಅಲ್ಲದೆ ಸುಹಾಸ್ ಶೆಟ್ಟಿಯನ್ನು ರೌಡಿಶೀಟರ್, ಗೂಂಡಾ ಎಂದು ಬಿಂಬಿಸಲಾಗುತ್ತಿದೆ. ಹಾಗಂಥ ಡಿ.ಕೆ.ಶಿವಕುಮಾರ್, ಪರಮೇಶ್ವರ್ ಮೇಲೂ ಕೇಸ್ ಇದೆ. ಅವರನ್ನು ಗೂಂಡಾ ಎಂದು ಕರೆಯೋದಕ್ಕೆ ಆಗುತ್ತಾ ಎಂದು ಹೇಳಿದರು.

ಗೃಹಸಚಿವ ಡಾ.ಜಿ.ಪರಮೇಶ್ವರ್ ಶನಿವಾರ ಮಂಗಳೂರಿಗೆ ಬಂದಿದ್ದರು. ಅವರು ತಾನು ದಲಿತರ ಪರ ಎಂದು ಹೇಳುತ್ತಾರೆ. ಆದರೆ ಅವರಿಗೆ ನನ್ನಾದರು ಕರೆಸಿ ಮಾತನಾಡಬಹುದಿತ್ತು. ಅವರು ಕೇವಲ ಮುಸ್ಲಿಮರನ್ನು ಮಾತ್ರ ಕರೆಸಿ ಮಾತನಾಡಿದ್ದಾರೆ ಎಂದರು.

ಸುಹಾಸ್ ಹತ್ಯೆ ಸಂದರ್ಭ ಇಬ್ಬರು ಬುರ್ಖಾಧಾರಿ ಮಹಿಳೆಯರ ಬಂದಿದ್ದರು. ಅವರು ಯಾರು, ಯಾಕಾಗಿ ಬಂದಿದ್ದರು ಅವರನ್ನು ಬಂಧಿಸಿ ತನಿಖೆ ಮಾಡಬೇಕು.ಯು.ಟಿ ಖಾದರ್ ಅವರು ಫಾಝಿಲ್ ಕುಟುಂಬವನ್ನು ನಿರಪರಾಧಿ ಎಂದು ಹೇಳಿದ್ದರು.‌ ಆದ್ದರಿಂದ ಯು.ಟಿ ಖಾದರ್ ಅವರನ್ನು ಸಹ ತನಿಖೆ ಮಾಡಬೇಕು ಎಂದು ಭಾಗೀರಥಿ ಮುರುಳ್ಯ ಹೇಳಿದರು.