ಮಂಗಳೂರು: ನಾಪತ್ತೆಯಾಗಿರುವ ಮಾಜಿ‌ ಶಾಸಕ ಮೊಯ್ದಿನ್ ಬಾವಾ ಅವರ ಸೋದರ ಉದ್ಯಮಿ ಮುಮ್ತಾಜ್ ಆಲಿಯವರಿಗಾಗಿ ಹುಡುಕಾಟ ಮುಂದುವರೆದಿದೆ.ಕೂಳೂರು ಸೇತುವೆಯ ಮೇಲೆ ಕಾರು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕೂಳೂರು ಸೇತುವೆ ಬಳಿ ನದಿಯಲ್ಲಿ ಶೋಧ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ.

ಮುಳುಗುತಜ್ಞ ಈಶ್ಚರ ಮಲ್ಪೆ ತಂಡ ಸಹಿತ ಹಲವು ರಕ್ಷಣಾ ತಂಡಗಳು ಶೋಧ ಕಾರ್ಯದಲ್ಲಿ ನಿರತವಾಗಿವೆ. ಮಾಜಿ ಶಾಸಕ ಮೊಯ್ದಿನ್ ಬಾವಾ ಕೂಡ ಸ್ಥಳದಲ್ಲಿದ್ದು ಕಾರ್ಯಾಚರಣೆ ಪರಿಶೀಲಿಸಿದರು.