ಮಂಗಳೂರು : ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ, ಬಡತನ ರೇಖೆಗಿಂತ ಕೆಳಗಿರುವ ಮತ್ತು ವಿಶೇಷ ಚೇತನರಿಗಾಗಿ 2025-26ನೇ ಸಾಲಿನಲ್ಲಿ ವಿವಿಧ ಯೋಜನೆಯಡಿ ಸೌಲಭ್ಯಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಯೋಜನೆಗಳ ವಿವರ:-
1)ಪ.ಜಾತಿ/ಪ.ಪಂಗಡದವರಿಗೆ ಪಕ್ಕಾ ಮನೆ, ವಿದ್ಯಾರ್ಥಿ ವೇತನ ಮತ್ತು ವೈದ್ಯಕೀಯ ವೆಚ್ಚ ಅರ್ಜಿ ಸಲ್ಲಿಸುವವರು ಸಹಾಯಧನಕ್ಕೆ ಜಾತಿ ಪ್ರಮಾಣ ಪತ್ರದ ಪ್ರತಿ, ಅರ್ಜಿ ನಮೂನೆ, ಪಡಿತರ ಚೀಟಿ ಪ್ರತಿ, ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕ ಪ್ರತಿ, 2025-26 ನೇ ಸಾಲಿನ ತೆರಿಗೆ ಪಾವತಿ ರಶೀದಿ ಸಲ್ಲಿಸಬೇಕು.
2)ಬಡತನ ರೇಖೆಗಿಂತ ಕೆಳಗಿರುವವರಿಗೆ ವೈದ್ಯಕೀಯ ವೆಚ್ಚ ಪಾವತಿಗೆ ಅರ್ಜಿ ಸಲ್ಲಿಸುವವರು ಅರ್ಜಿ ನಮೂನೆ, ಪಡಿತರ ಚೀಟಿ ಪ್ರತಿ, ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕ ಪ್ರತಿ, ವೈದ್ಯಕೀಯ ಚಿಕಿತ್ಸೆಯ ಬಿಲ್ಲು, 2025-26ನೇ ಸಾಲಿನ ತೆರಿಗೆ ಪಾವತಿ ರಶೀದಿ ಸಲ್ಲಿಸಬೇಕು.
3)ವಿಶೇಷ ಚೇತನರಿಗೆ ವಿದ್ಯಾರ್ಥಿ ವೇತನ, ಪೊಷಣಾ ಭತ್ಯೆ ಮತ್ತು ಕ್ರೀಡೆಗೆ ಪ್ರೋತ್ಸಾಹಧನಕ್ಕೆ ಅರ್ಜಿ ಸಲ್ಲಿಸುವವರು 2025-26ನೇ ಸಾಲಿನ ವ್ಯಾಸಂಗ ಪ್ರಮಾಣ ಪತ್ರದ ಪ್ರತಿ, ಅರ್ಜಿ ನಮೂನೆ, ಪಡಿತರ ಚೀಟಿ ಪ್ರತಿ, ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕ ಪ್ರತಿ, ವಿಶೇಷ ಚೇತನರ ಗುರುತಿನ ಚೀಟಿ ಪ್ರತಿ, 2025-26ನೇ ಸಾಲಿನ ತೆರಿಗೆ ಪಾವತಿ ರಶೀದಿ ಸಲ್ಲಿಸಬೇಕು.
ಅರ್ಹ ಫಲಾನುಭವಿಗಳು ಆಗಸ್ಟ್ 19 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಕೋಟೆಕಾರು ಪಟ್ಟಣ ಪಂಚಾಯತ್ ಕಚೇರಿ ಸಂಪರ್ಕಿಸಬಹುದು ಎಂದು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

