ವಿಟ್ಲ: ಇಂಟೀರಿಯರ್ ಡಿಸೈನರ್ ಒಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ವಿಟ್ಲ ಚಂದಳಿಕೆ ಸಿಪಿಸಿಆರ್‌ಐ ಬಳಿ ಭಾನುವಾರ ಬೆಳಗ್ಗೆ ನಡೆದಿದೆ.
ಮೃತರನ್ನು ಸಿಪಿಸಿಆರ್‌ಐ ನಿವಾಸಿ, ಇಂಟೀರಿಯರ್ ಡಿಸೈನ್ ಇಂಜಿನಿಯರ್ ಕಿಶನ್ ಭಟ್ (55) ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

