ದೇರಳಕಟ್ಟೆ: ವಸಡಿನ ದಂತ ಶಾಸ್ತ್ರ ವಿಭಾಗ, ಯೆನೆಪೋಯ ದಂತ ಕಾಲೇಜು, ಆಸ್ಪತ್ರೆ, ದೇರಳಕಟ್ಟೆ ಮತ್ತು ಗ್ರೀನ್ ವ್ಯೂವು ಪ್ರಾಥಮಿಕ ಕಾಲೇಜು, ಅಡ್ಕರ್ ಪಡುಪು, ದೇರಳಕಟ್ಟೆಯ ಸಹಯೋಗದಲ್ಲಿ ಬಾಯಿಯ ಸ್ವಚ್ಛತಾ ದಿನದ ಕುರಿತಾದ ಮಾಹಿತಿ ಮತ್ತು ದಂತ ತಪಾಸಣೆ ಶಿಬಿರವನ್ನು ದಿನಾಂಕ 30-7-2026( ಗುರುವಾರ ) ದಂದು ನಡೆಸಲಾಯಿತು.

ಜನಾಬ್ ಫರ್ವೇಜ್ ಆಲಿ, ಸಂಚಾಲಕರು, ಜಮಿಯಾತುಲ್ ಫಲಹ, ಗ್ರೀನ್ ವ್ಯೂ ಸಂಸ್ಥೆ, ಅಡ್ಕರ್ ಪಡುಪು, ಶ್ರೀ ಯುತ ಸಲ್ಮಾನ್,ಅಧ್ಯಕ್ಷರು,ರಿಯಾದ್, ಜಮಿಯಾತುಲ್ ಫಲಹ, ಏನ್ ಆರ್ ಯು ಐ, ಶ್ರೀಯುತ ಶರೀಫ್, ಸದಸ್ಯರು,ರಿಯಾದ್ ಜಮಿಯಾತುಲ್ ಫಲಹ, ಏನ್ ಆರ್ ಯು ಐ, ಡಾ. ವಿನಿತ ಬೋಲೂರ್, ಮುಖ್ಯಸ್ಥರು, ವಸಡು ಶಾಸ್ತ್ರ ವಿಭಾಗ, ಯೆನೆಪೋಯ ದಂತ ಕಾಲೇಜು ಆಸ್ಪತ್ರೆ, ಶ್ರೀಯುತ ಅಬೂಬಕ್ಕರ್, ಪ್ರಾಂಶುಪಾಲರು, ಗ್ರೀನ್ ವ್ಯೂ ಸಂಸ್ಥೆ, ಉಪನ್ಯಾಸಕರು ವಸಡು ಶಾಸ್ತ್ರ ವಿಭಾಗ, ಸ್ನಾತಕೋತರ ದಂತ ವೈದ್ಯ ವಿದ್ಯಾರ್ಥಿಗಳು, ಇಂಟರ್ನ, ಬೋದಕೇತರ ಸಿಬಂದಿಗಳು ಉಪಸ್ಥಿತರಿದ್ದರು.

ಡಾ. ವಿನಿತ ಬೋಲೂರ್ ಕಾರ್ಯಕ್ರಮದ ಉಪಯುಕ್ತತೆಯ ಕುರಿತು ಮಾಹಿತಿ ನೀಡಿದರು. ಡಾ.ಶಿಲ್ಪಾ ಮಲ್ಲಿಕ್, ಡಾ. ಷಜ, ಡಾ. ಶ್ರದ್ದಾ,ಸ್ನಾತಕೋತರ ದಂತ ವೈದ್ಯ ವಿದ್ಯಾರ್ಥಿನಿಯರು ” ಬಾಯಿಯ ನೈರ್ಮಲ್ಯ ದ ಕುರಿತು ಮಾಹಿತಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.ಶಿಬಿರದಲ್ಲಿ ಸುಮಾರು 100 ವಿದ್ಯಾರ್ಥಿಗಳು ಪಾಲ್ಗೊಂಡು ಪ್ರಯೋಜನವನ್ನು ಪಡೆದುಕೊಂಡರು. ಟೂತ್ ಪೇಸ್ಟ್ ಕಿಟ್ಟನು ಮಕ್ಕಳಿಗೆ ವಿತರಿಸಲಾಯಿತು.