ಮಂಗಳೂರು: ಪಾಕ್ ಉಗ್ರರ ನೆಲೆಗಳ ಮೇಲೆ ಭಾರತದ ಏರ್ ಸ್ಟ್ರೈಕ್ ಹಿನ್ನಲೆ ಭಾರತ ಪಾಕ್ ನಡುವೆ ಯುದ್ಧ ಕಾರ್ಮೋಡ ಕವಿದಿದ್ದು, ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲೂ ಪೂಜೆ ಪುನಸ್ಕಾರ ನಡೆಯುತ್ತಿದೆ.

ಭಾರತೀಯ ಸೈನಿಕರಿಗೆ ಶಕ್ತಿ ತುಂಬಲು ವಿಶೇಷ ಪೂಜೆ ನಡೆಯಿತು. ವಿಶೇಷ ಅಭಿಷೇಕಗೈದು ಶತ್ರು ಸಂಹಾರಕ್ಕಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಭಾರತೀಯ ಸೈನಿಕರ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥನೆ ಮಾಡಲಾಯಿತು.

ಆಪರೇಷನ್ ಸಿಂಧೂರ ಹಿನ್ನಲೆ ಮಹಿಳೆಯರ ಹಣೆಗೆ ಸಿಂಧೂರವಿಟ್ಟು ಸಂಭ್ರಮಿಸಿದರು. ಶ್ರೀ ಮಹಾಗಣಪತಿ, ಶ್ರೀ ಕಾಲ ಭೈರವ, ಶ್ರೀಅನ್ನಪೂರ್ಣೇಶ್ವರಿ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಲಾಯಿತು. ಭಾರತೀಯ ಸೇನೆಯ ಸಂರಕ್ಷೆಣೆಗಾಗಿ ಭಗವಂತನಲ್ಲಿ ಭಕ್ತರು ಪ್ರಾರ್ಥಿಸಿದರು.