ಮಂಗಳೂರು : ಮಕ್ಕಳಲ್ಲಿ ಭಯ ಭಕ್ತಿಯ ಪರಂಪರೆಯನ್ನು ನಮ್ಮ ತಾಯಂದಿರು ಬೆಳೆಸಿದ್ದಾರೆ, ಇದು ನಮ್ಮಧರ್ಮ‌ಸಂಸ್ಕ್ರತಿಯ ಉಳಿವಿಗೆ ಕಾರಣ ವಾಗುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದರು.

ಅವರು ಕಟೀಲು ಶ್ರೀ ದುರ್ಗಾರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಆರಂಭೋತ್ಸವ ಮತ್ತು ಏಳನೇ ಮೇಳದ ಪಾದಾರ್ಪಣೆ ಕಾರ್ಯಕ್ರಮದ ಅಂಗವಾಗಿ ಬಜಪೆಯಿಂದ ಕಟೀಲುವರೆಗೆ ದೇವರ ಬೆಳ್ಳಿ ಬಂಗಾರದ ಪರಿಕರಗಳ ಮೆರವಣಿಗೆಗೆ ಚಾಲನೆ ನೀಡಿ‌ ಮಾತನಾಡಿ ಯಕ್ಷಗಾನಕ್ಕೆ ಸುಮಾರು 800 ವರ್ಷದ ಇತಿಹಾಸವಿದೆ ಅನೇಕ ಹಿರಿಯರು ಯಕ್ಷಗಾನಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ.

ಸನಾತನ ಸಂಸ್ಕ್ರತಿ  ಬಗ್ಗೆ ತಪ್ಪು ಕಲ್ಪನೆ ಬೇಡ, ಈ ಕಾರಣದಿಂದಲೇ ನಮ್ಮ ಧರ್ಮದ ಮೇಲೆ ದಾಳಿ ನಡೆಯುತ್ತದೆ, ಆದರೆ ಯಾರೂ ದಾಳಿ ಮಾಡಿದರೂ ನಮ್ಮ ಧರ್ಮಕ್ಕೆ ಅಪಾಯವಿಲ್ಲ, ನನಗೆ ಮತ್ತು ನಮ್ಮ ಕುಟುಂಬಕ್ಕೆ ಕಟೀಲಮ್ಮನ ಬಗ್ಗೆ ಕಟೀಲು ದೇವಳದ ಬಗ್ಗೆ ವಿಶೇಷ ನಂಬಿಕೆ ಭಯ ಭಕ್ತಿ ಇದೆ, ಈ ಕಾರಣದಿಂದಲೇ ಇಲ್ಲಿಗೆ ಭೇಟಿ ನೀಡಿದ್ದೇನೆ ಎಂದರು.

ಈ ಸಂದರ್ಭ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ,  ಮಾಣಿಲ ಮೋಹನದಾಸ ಸ್ವಾಮೀಜಿ ಕಟೀಲು ದೇವಳದ ಮೊಕ್ತೇಸರ ವಾಸುದೇವ ಆಸ್ರಣ್ಣ, ದೇವಳದ ಮೊಕ್ತೇಸರ ಮತ್ತು ಆಡಳಿತ ಮಂಡಳಿ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು,  ಶಾಸಕ ಉಮಾನಾಥ ಕೋಟ್ಯಾನ್,

ವಿಧಾನ‌ಪರಿಷ್ಯತ್ ಸದಸ್ಯ ಭೋಜೇಗೌಡ,  ಮಾಜಿ ಸಂಸದ ನಳಿನ್ ಕುಮಾರ್ ಕಟೀಲು,  ಮಾನವ ಹಕ್ಕು ಆಯೋಗದ ಅಧ್ಯಕ್ಷ  ಶ್ಯಾಮ್ ಭಟ್, ಮಾಜಿ ಸಚಿವ ಕೃಷ್ಣ ಜೆ ಪಾಲೇಮಾರ್,  ಮಾಜಿ ಸಚಿವ ಅಭಯಚಂದ್ರ ಜೈನ್, ಬಿಜೆಪಿ ಜಿಲ್ಲಾಧ್ಯಕ್ಷ  ಸತೀಶ್ ಕುಂಪಲ, ಯುವ ನಾಯಕ ಮಿಥುನ್ ರೈ ಯಕ್ಷಧರ್ಮಭೋದಿನಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ರಾಘವೇಂದ್ರ ಆಚಾರ್,  ಮುಂಬೈ ಉದ್ಯಮಿ ಧಾರ್ಮಿಕ ಮುಖಂಡ ಐಕಳ ಗಣೇಶ್ ಶೆಟ್ಟಿ, ಲಕ್ಷೀನಾರಾಯಣ ಆಸ್ರಣ್ಣ,

ವೆಂಕಟರಮಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಕಮಲಾದೇವಿಪ್ರಸಾದ್ ಆಸ್ರಣ್ಣ,  ದೇವಳದ ಆಡಳಿತ ಮಂಡಳಿಯ ಪ್ರತಿನಿಧಿಗಳಾದ ಕಿಶೋರ್ ಶೆಟ್ಟಿ, ಕೊಡೆತ್ತೂರುಗುತ್ತು, ಪ್ರವೀಣ್ ದಾಸ್ ಭಂಡಾರಿ ಕೊಡೆತ್ತೂರುಗುತ್ತು, ಬಿಪಿನ್ ಪ್ರಸಾದ್ ಶೆಟ್ಟಿ ಕೊಡೆತ್ತೂರುಗುತ್ತು ಮತ್ತಿತರರು ಉಪಸ್ಥಿತರಿದ್ದರು. ಕಟೀಲು ದೇವಳದ ಪ್ರದಾನ ಅರ್ಚಕ ಹರಿನಾರಾಯಣ ದಾಸ ಆಸ್ರಣ್ಣ ಸ್ವಾಗತಿಸಿ,  ನಿತೇಶ್ ಎಕ್ಕಾರು ನಿರೂಪಿಸಿದರು.

ಬಜಪೆಯಿಂದ ಕಟೀಲುವರೆಗೆ ಏಳೂ ಮೇಳದ ದೇವರು ಮತ್ತು ಮೇಳದ ಚಿನ್ನ ಬೆಳ್ಳಿಯ ಪರಿಕರದೊಂದಿಗೆ, ಏಳು ಮೇಳದ ದೇವರಿಗೆ ಏಳು ವಿಶೇಷ ಅಲಂಕಾರಿತ ವಾಹನ, ಶ್ರೀ ದುರ್ಗೆಯ ವಿಶೇಷ ಅಲಂಕಾರಿಕ ಭಾವಚಿತ್ರದ ಮೆರವಣಿಗೆ, ಕೊಂಬು ಡೋಲು, ವಿವಿಧ ವೇಷಗಳೊಂದಿಗೆ ಭವ್ಯ ಮೆರವಣಿಗೆ ನಡೆಯಿತು.