ಮಂಗಳೂರು: ಕರಾವಳಿ, ಮಲೆನಾಡು ಸಹಿತ ರಾಜ್ಯದ ಎಲ್ಲ ಎಲ್ಲಾ ಪ್ರದೇಶಗಳ ಸರ್ವತೋಮುಖ ಅಭಿವೃದ್ದಿಗೆ ಹಾಗೂ ಸರ್ವ ಜನದ ಶಾಂತಿತೋಟ ನಿರ್ಮಿಸುವುದೇ ನಮ್ಮ ಸಂಕಲ್ಪ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕಂದಾಯ ಇಲಾಖೆ, ಗೃಹ ಮಂಡಾ ಹಾಗೂ ಸ್ಟಾರ್ಟ್ ಸಿಟಿ ವತಿಯಿಂದ 75 ಕೋ.ರೂ ವೆಚ್ಚದಲ್ಲಿ ಮಂಗಳೂರಿನ ಪಡೀಲ್ ನಲ್ಲಿ ನಿರ್ಮಿಸಿದ ನೂತನ ದ.ಕ ಜಿಲ್ಲಾಧಿಕಾರಿ ಕಛೇರಿಯನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯದ ಎಲ್ಲರಿಗೂ ಅರ್ಥಿಕ ಹಾಗೂ ಸಾಮಾಜಿಕ ಶಕ್ತಿ ತುಂಬುವ ಜತೆಗೆ ಸರ್ವರೂ ನೆಮ್ಮದಿಯಿಂದ ಬದುಕುವ ಸರ್ವ ಜನಾಂಗದ ಶಾಂತಿಯ ತೋಟ ನಿರ್ಮಿಸಬೇಕಿದೆ ಎಂದರು.

ಶಿಕ್ಷಣದಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ ಅಗ್ರಸ್ಥಾನದಲ್ಲಿದೆ ಬುದ್ಧಿವಂತರು, ವಿದ್ಯಾವಂತರು ಇಲ್ಲಿ ಯಾವುದೇ ಕಾರಣಕ್ಕೂ ಕೋಮುಗಲಭೆ ನಡೆಯಬಾರದು , ಅದಕ್ಕಾಗಿ ಎಲ್ಲಾ ರಾಜಕಾರಣಿಗಳ ಶ್ರಮಿಸಬೇಕಿದೆ. ಎಲ್ಲರೂ ಸಹ ಭಾತೃತ್ವದಿಂದ ಸಹಬಾಳ್ವೆ ನಡೆಸುವ ಮನೋಭಾವ ಬೆಳೆಸೋಣ ಎಂದರು.

ಬಾಗಲಕೋಟೆ, ದಕ್ಷಿಣ ಕನ್ನಡ ಕೋಲಾರದಲ್ಲಿ ಈ ಬಾರಿ ಮೆಡಿಕಲ್ ಕಾಲೇಜು ಆರಂಭಕ್ಕೆ ನಿರ್ಧರಿಸಿದ್ದೇವೆ. ಈ ಪೈಕಿ ದ.ಕ ಜಿಲ್ಲೆಯ ವುತ್ತೂರಿನಲ್ಲಿ 250 ಬೆಡ್‌ ಮೆಡಿಕಲ್ ಕಾಲೇಜು ಪ್ರಾರಂಭಿಸಲಿದ್ದೇವೆ ಎಂದರು. ಮಂಗಳೂರಲ್ಲಾಧಿಕಾರಿ ಕಚೇರಿ ಸಂರ್ಕಿ ಪ್ರಚಾಸೌಧ ಉದ್ಘಾಟನಾ ಕಾರ್ಯಕ್ರಮದಲ್ಲಿ (ಎಂಟುಸಾವಿರ ಮಂದಿ) ಹಲವು ಮಂದಿಗೆ ನಮ್ಮ ಭೂಮಿಯಡಿ ಹಕ್ಕುಪತ್ರ ವಿತರಿಸಿದರು.

ನವಮಂಗಳೂರಿನ ಹೆಬ್ಬಾಗಿಲು: ಸ್ಪಿಕರ್ ಖಾದರ್

ವಿಧಾನಸಭಾಧ್ಯಕ್ಷೆಯು ಟಿ.ಖಾದರ್ ಮಾತನಾಡಿ, ಪ್ರಜಾಸ್ ಧವು ಆಧುನಿಕ ಹಾಗೂ ನವಮಂಗಳೂರಿಗೆ ಪೆಬ್ಬಾಗಿಲು ಮುಂದಿನ 30 ವರ್ಷಕ್ಕೆ ನಗರದ ಅಭಿ ವೃದ್ಧಿಗೆ ಇದು ದಾರಿದೀಪ ದುಶ್ಚಟ ಮುಕ್ತ ಹಾಗೂ ದ್ವೇಷ ಮುಕ್ತ ಸಮಾಜ ನಿರ್ಮಾಣವಾಗಬೇಕು ತುಳು ಭಾಷೆಗೆ 2 ನೇ ಭಾಷೆಯ ಸ್ಥಾನಮಾನ ಗೌರವ ದೊರೆಯಬೇಕು ಎಂದರು.

ಭೂ ಗ್ಯಾರೆಂಟಿ ಯೋಜನೆ: ಕಂದಾಯ ಸಚಿವ ಕೃಷ್ಣಬೈರೇಗೌಡ

ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ., ఇల్లియವರೆಗೆ ದ.ಕ ಜಿಲ್ಲೆಯಲ್ಲಿ 17 ಸಾವಿರ ಮಂದಿಗೆ ಮಾತ್ರ ಜಾಗದ ಪೋಡಿ ಮಾಡಿ ಕೊಡಲಾಗಿದೆ. ಈಗ 8 ಸಾವಿರ ಮಂದಿಗೆ ಪೋಡಿ: ಭಾಗ್ಯ ನೀಡಲಾಗುತ್ತಿದೆ. ಮುಂದಿನ ಒಂದೂವರೆ ವರ್ಷದಲ್ಲಿ 80 ಸಾವಿರ ಮಂದಿಗೆ ಆರ್‌ಟಿಸಿ ನೀಡಲಾಗುವುದು. ಮನೆ ಬಾಗಿಲಿಗೆ ನಮ್ಮ ಅಧಿಕಾರಿಗಳು ಬರಲಿದ್ದಾರೆ ಭೂವಿವಾದದ ವಿಷಯ ಬಿಟ್ಟು ಜನರಿಗಾಗಿ ನಮ್ಮ ಸರಕಾರ ನಡೆಸಲಿದೆ ಎಂದರು.

ಪ್ರಜಾಸೌಧ’ ; ಒಂದೇ ಸೂರಿನಡಿ ಎಲ್ಲಾ ಕಚೇರಿ

‘ಪ್ರಜಾ ಸೌಧ’ದ ಒಂದೇ ಸೂರಿನಡಿ ಲಭ್ಯವಾಗಲಿವೆ. ಜಿಲ್ಲಾಧಿಕಾರಿ ಕೊಠಡಿ, ಜಿಲ್ಲಾಧಿಕಾರಿಗಳ ನ್ಯಾಯಾಲಯ, ಕಂದಾಯ ಶಾಖೆ, ಅವರ ಜಿಲ್ಲಾಧಿಕಾರಿಗಳ ಕಚೇರಿ/ನ್ಯಾಯಾಲಯ, ಆಡಳಿತ ಶಾಖೆ, ಟಪ್ಪಾಲು ನಾಖೆ, ಭೂಮಾಪನ ಇಲಾಖೆ, ಸಭಾಂಗಣ, ಚುನಾವಣೆ ಶಾಖೆ, ಧಾರ್ಮಿಕ ದತ್ತಿ ಶಾಖೆ, ದಲ್ಲಾ ನಗರಾಭಿವೃದ್ಧಿ ಕೋಶ, ನಗರ ವಸತಿ ಶಾಖೆ ರಾಷ್ಟ್ರೀಯ ಹೆದ್ದಾರಿ ಆರ್ಥಿಟೇಕನ್ ಶಾಖೆ, ವೀಡಿಯೋ ಕಾನ್ಸರೆನ್ಸ್ ಕೊಠಡಿ, ಸ್ಪಂದನ ಕೇಂದ್ರ/ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ದತ್ತು ಮಕ್ಕಳ ಮಾರ್ಗದರ್ಶನ ಕೇಂದ್ರ, ವಹಣೆ (ಆರ್ ಟಿಸಿ) ವಿಸರಣೆ/ ಅಟಲ್ ಜೀ ಜನಸ್ನೇಹಿ ಕೇಂದ್ರ ಆಧಾರ್ ನೋಂದಣಿ, ಆಹಾರ ನಾಗರಿಕ ಪೂರೈಕೆ ಇಲಾಖೆ, ಪಡಿತರ ಚೀಟಿ ಶಾಖೆ, ಸಹಾಯಕ ನಿರ್ದೇಶಕರ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ, ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ, ಜಿಲ್ಲಾ ಖಜಾನೆ ‘ಪ್ರಜಾಸೌಧ’ದಲ್ಲಿ ಕಾರ್ಯನಿರ್ವಹಿಸಲಿದೆ.

ರಾಜಕೀಯ ಬೇಡ : ಉಸ್ತುವಾರಿ ಸಚಿವ ದಿನೇಶ್

ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡು ರಾವ್ ಮಾತನಾಡಿ, ರಾಜ್ಯ ಸರಕಾರದ ಜನಪರ ಆಡಳಿತಕ್ಕೆ ಸಾಕ್ಷಿಯಾಗಿ ಪ್ರಜಾಸೌಧ ನಿರ್ಮಿಸ ಲಾಗಿದೆ. ರಾಜಕೀಯ ಎನೇ ಇರಲಿ ಆದರೆ ಅಭಿವೃದ್ಧಿ ವಿಷಯ ಬಂದಾಗ ರಾಜಕೀಯ, ಪಕ್ಷ ರಹಿತವಾಗಿ ಕೆಲಸಮಾಡಬೇಕು ಎಂದರು. ಎಲ್ಲಾ ಕ್ಷೇತ್ರಕ್ಕೂಸಿಗಲಿ: ಅಧ್ಯಕ್ಷತೆಯನ್ನ ಶಾಸಕ ವೇದವ್ಯಾಸ ಕಾಮತ್ ವಹಿಸಿದ್ದರು.

ನಗರಾಭಿವೃದ್ಧಿ ಸಚಿವ ಸುರೇಶ್ ಬೈರತಿ, ಸಿಎಂ ಮು.ಕಾರ್ಯದರ್ಶಿ ನಝೀರ್ ಅಹ್ಮದ್, ಜಿಲ್ಲಾದಿಕಾರಿ ಮುಲ್ಲೈ ಮುಗಿಲನ್ , ಸಂಸದ ಬ್ರಿಜೇಶ್ ಚೌಟ ಶಾಸಕ ಅಶೋಕ್ ಕುಮಾರ್ ರೈ, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜಾ, ಮಂಜುನಾಥ ಭಂಡಾರಿ, ಮಾಜಿ ಸಚಿವರಾದ ರಮಾನಾಥ ರೈ , ಅಭಯಚಂದ್ರ ಜೈನ್, ಉಪಸ್ಥಿತಿ ಇದ್ದರು.