ಮಂಗಳೂರು : ಕೆಲವು ದಿನಗಳಲ್ಲಿಎಸ್‌ಐಟಿ ತಂಡಕ್ಕೆ ಕುಳಿತುಕೊಳ್ಳಲು ಶಾಮಿಯಾನ ವ್ಯವಸ್ಥೆ ಮಾಡಲಾಗಿತ್ತು. ಇದರ ಬಿಲ್‌ ಕೂಡ ಬಾಕಿ ಇದೆ. ಹಾರೆ, ಪಿಕಾಸು, ನೀರಿನ ಬಾಟಲಿ, ಕೂಲಿಯಾಳುಗಳನ್ನು ಕರೆತಂದ ವಾಹನ ಬಾಡಿಗೆ ಹೀಗೆ ಒಟ್ಟು 2 ಲಕ್ಷಕ್ಕೂ ಅಧಿಕ ಬಿಲ್‌ ಕೊಡಲು ಬಾಕಿ ಇದೆ.

ಒಟ್ಟು 17 ಕಡೆಗಳಲ್ಲಿ ಹೊಂಡಗಳನ್ನು ತೋಡಿ ಶೋಧನೆ ನಡೆಸಲಾಗಿತ್ತು. ಈ ಸಂದರ್ಭ ಹಲವು ಕೂಲಿಯಾಳುಗಳು ದುಡಿದಿದ್ದು, ಜೆಸಿಬಿಯನ್ನೂ ಬಳಸಲಾಗಿತ್ತು.

ಜೆಸಿಬಿ ಮಾಲೀಕರು ಕೇವಲ ದುಡಿದ ಗಂಟೆಯನ್ನು ಮಾತ್ರ ಲೆಕ್ಕ ಹಾಕಿ ಒಟ್ಟು 71,500 ರೂ. ಬಿಲ್‌ ಮಾಡಿ ಕೊಟ್ಟಿದ್ದಾರೆ. ಆದರೆ ಜೆಸಿಬಿ ಬಾಡಿಗೆ ಇನ್ನೂ ಬಂದಿಲ್ಲ ಬಿಲ್‌ ಪಾವತಿ ಬಾಕಿ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು. ನಾವು ಕೇವಲ ತನಿಖೆ ಮಾತ್ರ ಮಾಡಿದ್ದೇವೆ ಎಂದಿದ್ದಾರೆ ಪ್ರಣವ್‌ ಮೊಹಾಂತಿ, ಮುಖ್ಯಸ್ಥ, ಎಸ್‌ಐಟಿ ತಂಡ

ಧರ್ಮಸ್ಥಳ ಶವ ಶೋಧ ಪ್ರಕರಣದ ಜೆಸಿಬಿ ಕಾರ್ಮಿಕರಿಗೆ ಸಂಬಳವೇ ಬಂದಿಲ್ಲ

ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಡಲಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಸರಕಾರ ಎಸ್‌ಐಟಿ ರಚಿಸಿ ನಡೆಸಿದ ತನಿಖೆ ಸಂದರ್ಭ ದುಡಿದ ಕಾರ್ಮಿಕರ ವೇತನ, ಜೆಸಿಬಿ ಬಾಡಿಗೆ ಇನ್ನೂ ಪಾವತಿಯಾಗಿಲ್ಲ ಎಂಬ ಕೂಗು ಕೇಳಿಬಂದಿದೆ.

ಎಸ್‌ಐಟಿ ತನಿಖೆ ಶುರುವಾಗಿ ಮಾಸ್ಕ್‌ ಮ್ಯಾನ್‌ ಚಿನ್ನಯ್ಯನನ್ನು ಆತ ಹೇಳಿದ ಸ್ಥಳಕ್ಕೆ ಕರೆದುಕೊಂಡು ಬಂದು, ಸ್ಥಳ ಗುರುತು ಮಾಡಿ ಒಟ್ಟು 17 ಕಡೆಗಳಲ್ಲಿ ಹೊಂಡಗಳನ್ನು ತೋಡಿ ಶೋಧನೆ ನಡೆಸಲಾಗಿತ್ತು. ಈ ಸಂದರ್ಭ ಹಲವು ಕೂಲಿಯಾಳುಗಳು ದುಡಿದಿದ್ದು, ಜೆಸಿಬಿಯನ್ನೂ ಬಳಸಲಾಗಿತ್ತು.

2025ರ ಜು.28ರಂದು ಎಸ್‌ಐಟಿ ಚಿನ್ನಯ್ಯನನ್ನು ಕರೆದುಕೊಂಡು ಬಂದು ಸ್ಥಳ ಗುರುತು ಮಾಡಿತ್ತು. ಅಂದಿನಿಂದಲೇ ಎಸ್‌ಐಟಿ ತಂಡದ ಸಹಾಯಕ್ಕೆ ಕೂಲಿಯಾಳುಗಳು ದುಡಿದಿದ್ದರು. ಜು.29ರಂದು ಶೋಧನೆ ಪ್ರಕ್ರಿಯೆ ಮಾನವ ಶ್ರಮದ ಮೂಲಕ ಶುರುವಾಯಿತು. ಮಣ್ಣು ಅಗೆತ ಕಷ್ಟವಾದಾಗ ಜೆಸಿಬಿ ತರಿಸಲಾಯಿತು. ಬಳಿಕ ಹಲವು ದಿನಗಳವರೆಗೂ ಮಾನವ ಶ್ರಮ ಹಾಗೂ ಜೆಸಿಬಿ ಮೂಲಕ ಕೆಲಸ ನಡೆದಿದೆ.

ಆ.13ರವರೆಗೂ ಶೋಧ ನಡೆಸಲಾಗಿತ್ತು. 2, 3, 4, 5 ಪಾಯಿಂಟ್‌ ಹೊರತುಪಡಿಸಿ ಉಳಿದೆಲ್ಲ ಪಾಯಿಂಟ್‌ನಲ್ಲೂ ಒಟ್ಟು ಹತ್ತು ದಿನ ಜೆಸಿಬಿಯಿಂದ ಕೆಲಸ ಮಾಡಲಾಗಿತ್ತು. 13ನೇ ಪಾಯಿಂಟ್‌ ದೊಡ್ಡದಾಗಿ ಅಗೆದ ಕಾರಣ ಸಣ್ಣ ಹಾಗೂ ದೊಡ್ಡ ಎರಡು ಜೆಸಿಬಿ ಬಳಸಲಾಗಿತ್ತು. ಕೆಲ ದಿನಗಳಲ್ಲಿ ಜೆಸಿಬಿ ಬೇಕಾಗುತ್ತದೆ, ಬೇರೆ ಹೋಗಬೇಡಿ ಅಂತ ಜೆಸಿಬಿಯನ್ನು ಸುಮ್ಮನೆ ನಿಲ್ಲಿಸಿದ್ದರು. ಇದನ್ನು ಜೆಸಿಬಿ ಮಾಲೀಕರು ಲೆಕ್ಕ ಹಾಕದೇ ಕೇವಲ ದುಡಿದ ಗಂಟೆಯನ್ನು ಮಾತ್ರ ಲೆಕ್ಕ ಹಾಕಿ ಒಟ್ಟು 71,500 ರೂ. ಬಿಲ್‌ ಮಾಡಿ ಕೊಟ್ಟಿದ್ದಾರೆ. ಆದರೆ ಜೆಸಿಬಿ ಬಾಡಿಗೆ ಇನ್ನೂ ಬಂದಿಲ್ಲ

ಜು.28ರಂದು ಚಿನ್ನಯ್ಯನನ್ನು ಕರೆದುಕೊಂಡು ಬಂದು ಮೊದಲು ಪಾಯಿಂಟ್‌ ಗುರುತು ಮಾಡುವಲ್ಲಿಂದ ಆರಂಭಗೊಂಡು ಆ.13ರಂದು ಶೋಧ ಕೊನೆಗೊಳ್ಳುವವರೆಗೂ ಬೇರೆ ಬೇರೆ ಪಂಚಾಯಿತಿ ವ್ಯಾಪ್ತಿಯ ಕಾರ್ಮಿಕರನ್ನು ಕರೆಸಿಕೊಳ್ಳಲಾಗಿತ್ತು. ದಿನನಿತ್ಯ 10-12 ಕಾರ್ಮಿಕರು ಎಸ್‌ಐಟಿ ತಂಡಕ್ಕೆ ಸಹಾಯವಾಗಿ ದುಡಿಯುತ್ತಿದ್ದರು. ಆದರೆ ಕಾರ್ಮಿಕರ ಕೂಲಿ ಕೊಡದೇ ಬಾಕಿ ಉಳಿಸಿಕೊಳ್ಳಲಾಗಿದೆ. ಕಾರ್ಮಿಕರದ್ದು ಒಟ್ಟು 80 ಸಾವಿರಕ್ಕೂ ಅಧಿಕ ಹಣ ಕೊಡುವುದು ಬಾಕಿ ಇದೆ. ಇದೀಗ ಕಾರ್ಮಿಕರು ದುಡಿದ ಹಣಕ್ಕಾಗಿ ಅಲೆದಾಡುವಂತಾಗಿದೆ.

ಎಸ್‌ಐಟಿ ತಂಡಕ್ಕೆ ಬೇಕಾದ ಕೂಲಿಯಾಳುಗಳು, ಜೆಸಿಬಿ, ಇತರ ಸಾಮಗ್ರಿಗಳನ್ನು ಒದಗಿಸುವ ಜವಾಬ್ದಾರಿಯನ್ನು ಸ್ಥಳೀಯ ಧರ್ಮಸ್ಥಳ ಗ್ರಾಪಂಗೆ ವಹಿಸಲಾಗಿತ್ತು. ಅದರಂತೆ ಸ್ಥಳೀಯ ಗ್ರಾಪಂ ಎಸ್‌ಐಟಿ ತಂಡದ ನಿರ್ದೇಶನದಂತೆ ಎಲ್ಲಅಗತ್ಯಗಳನ್ನು ಒದಗಿಸಿದ್ದರು. ಆದರೆ ಪಂಚಾಯಿತಿ ಹಣವನ್ನು ಎಸ್‌ಐಟಿ ಕೆಲಸಕ್ಕೆ ಭರಿಸುವಂತಿಲ್ಲ ಎನ್ನಲಾಗಿದೆ. ಇದನ್ನು ಎಸ್‌ಐಟಿ ಟೀಂ ಭರಿಸಬೇಕಂತೆ. ಹೀಗಾಗಿ ಬಾಕಿ ಬಿಲ್‌ನ್ನು ಯಾರಲ್ಲಿ ಕೇಳುವುದು ಎನ್ನುವ ಗೊಂದಲವಿದೆ. ಇದಷ್ಟೇ ಅಲ್ಲದೆ, ಶಾಮಿಯಾನ , ಈರು, ಹಾರೆ, ಪಿಕಾಸು ಸಾಮಾಗ್ರಿಗಳಿಗೆ , ಅವುಗಳ ತಂದ ಕಟ್ಟಡಗಳ ಬಾಡಿಗೆ ಸೇರಿ ಸುಮಾರು 2 ಲಕ್ಷ ರೂಪಾಯಿ ಬಾಕಿ ಇದೆ.