ಮಂಗಳೂರು : ದಕ್ಷಿಣ ಕನ್ನಡ ಮೋಟಾರ್ ಸ್ಪೋರ್ಟ್ಸ್ ಇತಿಹಾಸದಲ್ಲೇ ಮಹತ್ವದ ಕ್ಷಣಕ್ಕೆ ವೇದಿಕೆ ಸಜ್ಜಾಗಿದೆ. ಐಎಂಎಸ್‌ಸಿ. ಮೋಟಾರ್ ಸ್ಪೋರ್ಟ್ಸ್ನ 25ನೇ ವರ್ಷದ ಸಂಭ್ರಮದ ಅಂಗವಾಗಿ 400ನೇ ಸ್ಪರ್ಧೆಯಾಗಿ ಪ್ರತಿಷ್ಠಿತ ಐಎಂಎನ್ಸಿ ಆಫ್ ರೋಡ್ ಟ್ರೋಪಿ 2020ನ್ನು ಮಾ.28, 29ರಂದು ಮಂಗಳೂರು ಸಮೀಪದ ಒಡ್ದುರು ಫಾರ್ಮ್ಸ್ನಲ್ಲಿ ಆಯೋಜಿಸಿದೆ.
ಪ್ರಕೃತಿ ಸೌಂದರ್ಯದ ಮಧ್ಯೆ ಗರ್ಜಿಸುವ ಎಂಜಿನ್ಗಳು, ಕಠಿಣ ಪಥಗಳು ಮತ್ತು ಸಾಹಸಮಯ ಸ್ಪರ್ಧೆಗಳು ಕ್ರೀಡಾಭಿಮಾನಿಗಳನ್ನು ರಂಜಿನಲಿದೆ. ಈ ವಿಶೇಷ ಆವೃತ್ತಿಗೆ ದೇಶದ ವಿವಿಧ ಭಾಗಗಳಿಂದ ಭಾರಿ ಸ್ಪಂದನೆ ವ್ಯಕ್ತವಾಗಿದ್ದು, 12 ವಿಭಾಗಗಳಲ್ಲಿ 140ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ. ಸುಮಾರು 3,000ಕ್ಕೂ ಹೆಚ್ಚು ಪ್ರೇಕ್ಷಕರು ಆಗಮಿಸುವ ನಿರೀಕ್ಷೆಯಿದ್ದು, ಕರಾವಳಿ ಭಾಗದಲ್ಲಿ ಆಫ್ ರೋಡ್ ಕ್ರೀಡೆಗೆ ಇರುವ ಅಭಿಮಾನವನ್ನು ಇದು ತೋರಿಸುತ್ತದೆ.
ಈ ಬಾರಿ ವಿಜೇತರಿಗೆ ಒಟ್ಟು 15 ಲಕ್ಷ ರೂ. ಮೌಲ್ಯದ ನಗದು ಬಹುಮಾನ, ಟ್ರೋಪಿ ಮತ್ತು ಗಿಫ್ಟ್ ನೀಡಲಾಗುತ್ತಿದ್ದು, ಇದು ಈ ಸ್ಪರ್ಧೆಯ ವೈಭವವನ್ನು ಇನ್ನಷ್ಟು ಹೆಚ್ಚಿಸಿದೆ.
ವಿಧಾನಸಭೆ ಸ್ಪೀಕರ್.ಯು.ಟಿ.ಖಾದರ್, ಸಂಸಾರದ ಬ್ರಿಜೇಶ್ ಚೌಟ,ಶಾಸಕರಾದ ರಾಜೇಶ್ ನಾಯ್ಕ ಉಳಿಪಾಡಿಗುತ್ತು, ಉಮಾನಾಥ ಕೋಟ್ಯಾನ್. ವೇದವ್ಯಾಸ ಕಾಮತ್,ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ,ಜಿಲ್ಲಾಧಿಕಾರಿ ದರ್ಶನ್ಎಚ್.ವಿ.ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎಂ.ಮೋಹನ್ ಅಳ್ಳ,ಮಾ.28ರಂದು ಬೆಳಗ್ಗೆ ಐಎಂಎಸ್‌ಸಿ ಆಫ್ ರೋಡ್ ಟ್ರೋಪಿ 2026 ಚಾಂಪಿಯನ್‌ಷಿಪ್ ಉದ್ಘಾಟನೆಮಾಡಲಿದ್ದು , ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ. ಎಂದು ಸಂಘಟಕರ ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿಯನ್ನ ನೀಡಿದರು.

