ಧರ್ಮಸ್ಥಳದಲ್ಲಿ ಅತ್ಯಾಚಾರ ಮಾಡಿ ಹೂತು ಹಾಕಲಾಗಿದೆ ಎನ್ನಲಾದ ಅನನ್ಯ ಭಟ್ ಪ್ರಕರಣ ದಿನದಿಂದ ದಿನಕ್ಕೆ ರೋಚಕ ಟ್ವಿಸ್ಟ್ ಪಡೆಯುತ್ತಲೇ ಇದೆ. ಇದೀಗ ನನಗೆ ಆರೋಗ್ಯ ಸರಿಯಿಲ್ಲ, ಬೆದರಿಕೆ ಇದೆ. ನನಗೆ ರಕ್ಷಣೆ ಕೊಡಿ ಎಂದು ಪೊಲೀಸರಿಗೆ ಸುಜಾತ ಭಟ್ ಮನವಿ ಮಾಡಿದ್ದಾರೆ.
ನಿನ್ನೆಯಷ್ಟೇ ಖಾಸಗಿ ಯುಟ್ಯೂಬ್ ನಲ್ಲಿ ಸಂದರ್ಶನದ ವೇಳೆ ಗಿರೀಶ್ ಮಟ್ಟಣ್ಣನವರ್ ನನಗೆ ಸುಳ್ಳು ಹೇಳುವಂತೆ ಹೇಳಿಕೊಟ್ಟಿದ್ದು ಎಂದು ಹೇಳಿದ್ದರು. ಆ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ನನನ್ನೂ ವಕೀಲರೊಬ್ಬರು ಬಲವಂತವಾಗಿ ಕರೆದುಕೊಂಡು ಹೋಗಿ ನಾಲ್ಕು ಜನರ ಹೆಸರನ್ನು ಹೇಳುವಂತೆ ಒತ್ತಾಯ ಮಾಡಿದ್ದರು.
ಅಲ್ಲದೇ ಹೀಗೆ ಹೇಳಿದರೆ ನಿನಗೆ ಸಹಾಯ ಮಾಡುವುದಾಗಿ ಕೂಡ ಹೇಳಿದ್ದರು. ಇದರಲ್ಲಿ ನನ್ನದೇನೂ ತಪ್ಪಿಲ್ಲ, ಅದನ್ನು ಯಾರೂ ನಂಬಬೇಡಿ. ನನ್ನನ್ನು ಬಲವಂತವಾಗಿ ಹೆಸರು ಹೇಳುವಂತೆ ಮಾಡಿದ್ದಕ್ಕೆ ಆ ರೀತಿ ಹೆಸರು ಹೇಳಿದ್ದೇನೆ ಅಷ್ಟೇ ಎಂದು ಹೊಸ ಕಥೆ ಶುರು ಮಾಡಿದ್ದಳು.
ಅಷ್ಟೇ ಅಲ್ಲದೆ, ವಿಡಿಯೋ ಅಪ್ಲೋಡ್ ಮಾಡಿದ್ದಕ್ಕೆ ಯುಟ್ಯೂಬರ್ ಗೆ ನಿನ್ನ ವಿರುದ್ಧ ಸುಳ್ಳು ದೂರು ದಾಖಲಿಸುತ್ತೇನೆ ಎಂದು ಬೆದರಿಕೆ ಕೂಡ ಹಾಕಿದ್ದರು. ಇದೀಗ ಆ ವಿಡಿಯೋ ಕೂಡ ವೈರಲ್ ಆಗುತ್ತಿದ್ದಂತೆ ಸುಜಾತ ಭಟ್ ಹೊಸ ಡ್ರಾಮಾ ಶುರು ಮಾಡಿದ್ದಾರೆ.
ಅದರಂತೆ ನನಗೆ ಜೀವ ಬೆದರಿಕೆಯಿದೆ, ಮನೆಯ ಬಳಿ ಮಾಧ್ಯಮದವರು, ಸಾರ್ವಜನಿಕರು ಬರದಂತೆ ನಿರ್ಬಂಧ ಹೇರಿ, ಯಾರೂ ಮನೆಯ ಹತ್ತಿರ ಬರದಂತೆ ನೋಡಿಕೊಳ್ಳಿ ಎಂದು ಬನಶಂಕರಿ ಪೊಲೀಸ್ ಠಾಣೆಯಲ್ಲಿ ಮನವಿ ಮಾಡಿದ್ದಾರೆ.
ಸುಜಾತ ಭಟ್ ನೀಡಿದ ಮನವಿಯ ಮೇರೆಗೆ ಇದೀಗ ಬನಶಂಕರಿ ಪೊಲೀಸರು ಶಿಫ್ಟ್ ಲೆಕ್ಕದಲ್ಲಿ ಪೊಲೀಸರು ಸುಜಾತ ಭಟ್‌ಯ ಬಳಿ ಬ್ಯಾರಿಗೇಟ್ ಹಾಕಿ ಭದ್ರತೆ ನೀಡುತ್ತಿದ್ದಾರೆ. ಇಂದು ಎಸ್ಐಟಿ ಅಧಿಕಾರಿಗಳು ಸುಜಾತ ಭಟ್ ಅವರ ಮನೆಗೆ ಭೇಟಿ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಸುಜಾತ ಭಟ್‌ಗೆ ವಿಚಾರಣೆಗೆ ಹಾಜರಾಗುವಂತೆ ಬಿಎನ್‌ಎಸ್ 131 ಸೆಕ್ಷನ್‌ನಡಿ ಎಸ್‌ಐಟಿ ನೋಟಿಸ್ ನೀಡಿತ್ತು. ಆದರೆ ಆರೋಗ್ಯದ ಕಾರಣ ನೀಡಿ ವಿಚಾರಣೆಗೆ ಗೈರಾಗಿದ್ದರು.
ಆದರೆ ಸೆಕ್ಷನ್ ಬಿಎನ್‌ಎಸ್ 180 ಅಡಿ ಸುಜಾತ ಭಟ್ ಹೇಳಿಕೆ ದಾಖಲಿಸಲು ಅವಕಾಶವಿದ್ದು, ವಿಡಿಯೋ ರೆಕಾರ್ಡ್ ಮೂಲಕ ವಿಚಾರಣೆ ನಡೆಸಲಿದ್ದಾರೆ. ಇನ್ನು ಬಿಎನ್‌ಎಸ್ ಕಾಯ್ದೆ ಪ್ರಕಾರ ದೂರುದಾರರು ಅಥವಾ ಸಾಕ್ಷಿದಾರರು 60 ವರ್ಷಕ್ಕಿಂತ ಮೇಲ್ಪಟ್ಟಿದ್ರೆ ಅಥವಾ 18 ವರ್ಷದ ಒಳಗಿನವರಾಗಿದ್ರೆ ತನಿಖಾ ತಂಡ ದೂರುದಾರ/ಸಾಕ್ಷಿದಾರರ ನಿವಾಸಕ್ಕೆ ತೆರಳಿ ಹೇಳಿಕೆ ದಾಖಲಿಸಬಹುದು.
ಅದರಂತೆ ಸುಜಾತ ಭಟ್ ಗೆ ವಯಸ್ಸದ್ದರಿಂದ ಎಸ್ಐಟಿ ಅಧಿಕಾರಿಗಳೇ ಸ್ಥಳಕ್ಕೆ ಆಗಮಿಸಿ ವಿಚಾರಣೆ ನಡೆಸಲಿದ್ದಾರೆ. ಸದ್ಯ ಸುಜಾತ ಭಟ್ ಅವರ ಮನೆಯ ಮುಂದೆ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.

