ಬಂಟ್ವಾಳ; ಎರಡು ಲಾರಿಗಳಲ್ಲಿ ಅಕ್ರಮವಾಗಿ ಕೆಂಪು ಕಲ್ಲುಗಳನ್ನು ಸಾಗಿಸುತ್ತಿದ್ದುದನ್ನು ವಿಟ್ಲ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಶನಿವಾರ ವಿಟ್‌ ಠಾಣಾ ಉಪನಿರೀಕ್ಷಕ ರಾಮಕೃಷ್ಣ ರವರು ತಮ್ಮ ಸಿಬ್ಬಂದಿಗಳೊಂದಿಗೆ ವಿಟ್ಲ ಕಸಬಾ ಗ್ರಾಮದ ಕಾಶಿಮಠ ಎಂಬಲ್ಲಿ ವಾಹನ ತಪಾಸಣೆ ಮಾಡುತ್ತಿದ್ದಾಗ ಉಕ್ಕುಡ ಕಡೆಯಿಂದ ವಿಟ್ಲ ಕಡೆಗೆ ಬರುತ್ತಿದ್ದ KA 01 AJ 9542 & KA 50 AF 3229 ನೋಂದಣಿ ಸಂಖ್ಯೆಯ ಎರಡು ಲಾರಿಗಳನ್ನು ನಿಲ್ಲಿಸಿ, ತಪಾಸಣೆ ನಡೆಸಲಾಗಿ ಅದರಲ್ಲಿ ತಲಾ 500 ಕೆಂಪು ಕಲ್ಲುಗಳಿತ್ತು.

ಆದರೆ ಕೆಂಪು ಕಲ್ಲು ಸಾಗಾಟದ ಬಗ್ಗೆ ಪರವಾನಿಗೆ ಇಲ್ಲದ ಕಾರಣ ಸದ್ರಿ ಲಾರಿಗಳಿಗೆ ಕೆಂಪು ಕಲ್ಲು ತುಂಬಿಸಿ ಕಳುಹಿಸಿಕೊಟ್ಟ ಜಾಫರ್ ಹಾಗೂ ನಾಸೀರ್ ಎಂಬವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಹಾಗೂ ಲಾರಿಗಳನ್ನು ಹಾಗೂ ಚಾಲಕರ ನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.