ಮಂಗಳೂರು: ಅಕ್ರಮ ಗೋ ಹತ್ಯೆ ಮಂಗಳೂರಿನ ಕೆಂಜಾರಿನಲ್ಲಿ ನಡೆದಿದೆ. ಮೇಯಲು ಬಿಟ್ಟ ದನಗಳನ್ನು ಕದ್ದು ಗೋ ಹತ್ಯೆ ಮಾಡಲಾಗಿದೆ.
ಗೋಹತ್ಯೆ ಮಾಡಿದ ಸ್ಥಳದಲ್ಲಿ ಮೂರು ದನಗಳು ಪತ್ತೆಯಾಗಿದೆ. ನದಿ ಪಕ್ಕದಲ್ಲೇ ಗೋ ಹತ್ಯೆ ಮಾಡಿ ದುಷ್ಕರ್ಮಿಗಳು ಕಳೇಬರ ಎಸೆದಿದ್ದಾರೆ. ಈವರೆಗೆ ಸಾಕಷ್ಟು ಗೋವುಗಳನ್ನು ಹತ್ಯೆ ಮಾಡಿರುವ ಸಾಧ್ಯತೆ ಇದೆ.

ಪರಿಸರದ ತುಂಬಾ ತ್ಯಾಜ್ಯಗಳು ಕೊಳೆತು ನಾರುತ್ತಿದೆ. ಸ್ಥಳಕ್ಕೆ ಹಿಂದೂ ಕಾರ್ಯಕರ್ತರು, ಬಜಪೆ ಪೊಲೀಸರು ಭೇಟಿ ನೀಡಿದ್ದಾರೆ. ಸ್ಥಳೀಯವಾಗಿ ದನಗಳನ್ನು ಕಳೆದುಕೊಂಡವರ ಮಾಹಿತಿಯನ್ನು ಪೊಲೀಸರು ಪಡೆದಿದ್ದಾರೆ. ಬಜಪೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

