ಮಂಗಳೂರು : ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಮಾತನಾಡಿ, ಲಕ್ಷ್ಮೀಶ ಗಬ್ಬಡ್ಕ ನೀಡಿರುವ ಸಲಹೆಗಳನ್ನು ಕಾರ್ಯರೂಪಕ್ಕೆ ತರಲು ಆಗ್ರಹಿಸುತ್ತೇನೆ. ಇಲ್ಲಿ ನಡೆಯುತ್ತಿರುವುದು ಮತೀಯ ಜೊತೆಗೆ ಸೈದ್ಧಾಂತಿಕ ರೀತಿಯ ಸಂಘರ್ಷ ಇದನ್ನು ಕಾನೂನು ಮಾತ್ರದಿಂದ ಸುಲಭದಲ್ಲಿ ಸರಿಪಡಿಸಲಾಗದು.

ಸದ್ಯಕ್ಕೆ ಪೊಲೀಸ್ ಇಲಾಖೆ ದಂಧೆಗಳನ್ನು ನಿಲ್ಲಿಸಿದ್ದಾರೆ. ಕಮ್ಯುನಲ್ ಮತ್ತು ಇಲ್ಲಿ ನಡೆಯುವ ದಂಧೆಗಳಿಗೆ ಸಂಪರ್ಕ ಇದೆ. ಸೌಹಾರ್ದ ಬೆಳೆಸಲು ಸಂವಿಧಾನ ಅರಿವು ಕಾರ್ಯಕ್ರಮಗಳನ್ನು ಶಾಲೆಗಳಲ್ಲಿ ತರಬೇಕು. ಜನರ ಮನಸ್ಸಿನಲ್ಲಿ ಭಾವೈಕ್ಯತೆ ಬೆಳೆಸುವ ಕಾರ್ಯಕ್ರಮಗಳನ್ನು ಅಕಾಡೆಮಿ ಮೂಲಕ ಆಯೋಜಿಸಬೇಕು.

ನಾವೆಲ್ಲ ಹಿಂದಿನವರು ತುಳು, ಬ್ಯಾರಿ ಭಾಷೆಯನ್ನು ಮಾತೃಭಾಷೆ ಎನ್ನುವಂತೆ ಮಾತಾಡುತ್ತಿದ್ದೆವು. ಈಗಿನ ಯುವಜನರು ಬ್ಯಾರಿಯೂ ಗೊತ್ತಿಲ್ಲ. ಮುಸ್ಲಿಮ್ ಮಕ್ಕಳು ತುಳುವೂ ತಿಳಿದಿಲ್ಲ ಎನ್ನುವ ಸ್ಥಿತಿಯಾಗಿದೆ. ಅಂತರ ಸೃಷ್ಟಿಯಾಗಿದ್ದರಿಂದ ಈ ರೀತಿ ಆಗಿದೆ ಎನ್ನುವುದು ನನ್ನ ಭಾವನೆ ಎಂದರು.