ಮಂಗಳೂರು : ಆರ್‌ಎಸ್‌ಎಸ್‌ ನೋಂದಣಿ ವಿಚಾರವನ್ನು ಮುಂದಿಟ್ಟುಕೊಂಡು, ಸರ್ಕಾರಿ ನೌಕರರು ಹಾಗೂ ಇತರರಿಗೆ ಬೆಂಬಲವಾಗಿ ‘ನಾನೂ ಗಣಪತಿ’ ಎಂಬ ಚಳವಳಿ ಆರಂಭಿಸುವ ಆಲೋಚನೆ ಹೊಂದಿರುವುದಾಗಿ ಅನುಪಮಾ ಶೆಣೈ ತಿಳಿಸಿದರು. ಈ ಕುರಿತು ಜನರು, ನಿವೃತ್ತ ಸರ್ಕಾರಿ ನೌಕರರು, ಪೊಲೀಸರು ಹಾಗೂ ಯೋಧರು ಸಲಹೆ-ಸಹಕಾರ ನೀಡುವಂತೆ ಮನವಿ ಮಾಡಿದರು.

ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್‌ನ ರಾಷ್ಟ್ರೀಯ ಸರಸಂಘಚಾಲಕರಾಗಬೇಕು ಎಂಬ ವ್ಯಂಗ್ಯಾತ್ಮಕ ಸಲಹೆಯನ್ನೂ ನೀಡಿದ ಅವರು, ಆರ್‌ಎಸ್‌ಎಸ್‌ ನೋಂದಣಿ ಹಾಗೂ ಸರ್ಕಾರಿ ನೌಕರರ ಸಮಸ್ಯೆಗಳ ಕುರಿತು ಮುಂದಿನ ದಿನಗಳಲ್ಲಿ ಚರ್ಚೆ ನಡೆಸುವುದಾಗಿ ತಿಳಿಸಿದರು.

View this post on Instagram

A post shared by News Karnataka (@newskarnataka)