ಮಂಗಳೂರು:ಮಂಗಳೂರಿನ ಗಂಜಿಮಠದಲ್ಲಿರುವ HYDGEN ಘಟಕದಲ್ಲಿ HYDGEN ಇನ್ನೋವೇಶನ್ ಡೇ 2026 ಕಾರ್ಯಕ್ರಮವನ್ನು 2026ರ ಅಕ್ಟೋಬರ್ 15ರಂದು ಆಯೋಜಿಸುತ್ತಿದ್ದೇವೆ. ಇದು ವಾರ್ಷಿಕ 20 ಮೆಗಾವ್ಯಾಟ್ ಉತ್ಪಾದನಾ ಸಾಮರ್ಥ್ಯ ಹೊಂದಿರುವ ನಮ್ಮ ನೂತನ ತಯಾರಿಕಾ ಘಟಕ.

ಭಾರತವು ಎಲೆಕ್ಟ್ರೋಲೈಸರ್ಗಳನ್ನು ನಿರ್ಮಿಸಬಲ್ಲದು ಎಂಬುದನ್ನು ಈಗಾಗಲೇ ತೋರಿಸಿಕೊಟ್ಟಿದೆ. ಈಗಿನ ನಿಜವಾದ ಸವಾಲು ಅವುಗಳನ್ನು ದೊಡ್ಡ ಸಂಖ್ಯೆಯಲ್ಲಿ ತಯಾರಿಸುವುದು, ಅದೂ ಪ್ರತಿ ಬಾರಿಯೂ ಒಂದೇ ಗುಣಮಟ್ಟದಲ್ಲಿ ಮತ್ತು ಕಾರ್ಖಾನೆ ನಡೆಸುವವರಿಗೆ ಸೂಕ್ತವೆನಿಸುವ ಬೆಲೆಯಲ್ಲಿ. ಪ್ರಯೋಗಾಲಯದಲ್ಲಿ ಬೆಳೆಸಿದ ವಜ್ರ (ಲ್ಯಾಬ್-ಗ್ರೋನ್ ಡೈಮಂಡ್), ವಿಶೇಷ ರಾಸಾಯನಿಕಗಳು, ಔಷಧ ಮತ್ತು ಸೆಮಿಕಂಡಕ್ಟರ್ ಕ್ಷೇತ್ರಗಳ ಅನೇಕ ತಯಾರಕರು ಇಂದಿಗೂ ಹೈಡ್ರೋಜನ್ ಅನ್ನು ಸಿಲಿಂಡರ್ಗಳು ಮತ್ತು ಟ್ಯೂಬ್ ಟ್ರೇಲರ್ಗಳ ಮೂಲಕ ಖರೀದಿಸುತ್ತಿದ್ದಾರೆ.

ಅವರು ಪಾವತಿಸುವ ಮೊತ್ತದಲ್ಲಿ ಶೇ. 70–85ರಷ್ಟು ಭಾಗ ಹೈಡ್ರೋಜನ್ಗಾಗಿ ಅಲ್ಲ, ಅದರ ಕಂಪ್ರೆಷನ್, ಸಾಗಣೆ ಮತ್ತು ಸಂಗ್ರಹಣೆಗೆ ಖರ್ಚಾಗುತ್ತದೆ. ಒಂದು ಲಾರಿ ತಡವಾದರೂ ಇಡೀ ಉತ್ಪಾದನಾ ಸಾಲು ನಿಲ್ಲುವ ಸಾಧ್ಯತೆ ಇದೆ. ಹೈಡ್ರೋಜನ್ ಅನ್ನು ಅದನ್ನು ಬಳಸುವ ಕಾರ್ಖಾನೆಯಲ್ಲೇ ಉತ್ಪಾದಿಸಿದರೆ ಈ ವೆಚ್ಚ ಇಲ್ಲವಾಗುತ್ತದೆ. ಭಾರತೀಯ ಉದ್ಯಮಕ್ಕೆ ಬೇಕಾದ ಪ್ರಮಾಣದಲ್ಲಿ ಈ ವ್ಯವಸ್ಥೆಗಳನ್ನು ತಯಾರಿಸುವುದು ನಮ್ಮ ಕೆಲಸ. ಅದಕ್ಕಾಗಿಯೇ ಮಂಗಳೂರಿನ ಗಂಜಿಮಠದಲ್ಲಿ HYDGEN ಘಟಕವನ್ನು ನಿರ್ಮಿಸಿದ್ದೇವೆ.

ದಿನದ ಕಾರ್ಯಕ್ರಮ ಮಂಗಳೂರಿನ ಗಂಜಿಮಠದಲ್ಲಿರುವ HYDGEN ಘಟಕದ ವೀಕ್ಷಣೆಯೊಂದಿಗೆ ಆರಂಭವಾಗಲಿದೆ. ಅತಿಥಿಗಳು ಸ್ಟ್ಯಾಕ್ ಜೋಡಣೆ, ಸಿಸ್ಟಮ್ ಇಂಟಿಗ್ರೇಷನ್, ಪರೀಕ್ಷೆ ಮತ್ತು ಹೈಡ್ರೋಜನ್ ಗುಣಮಟ್ಟ ತಪಾಸಣೆ ಪ್ರಕ್ರಿಯೆಗಳನ್ನು ಒಂದೇ ಆವರಣದಲ್ಲಿ ನೇರವಾಗಿ ನೋಡಲಿದ್ದಾರೆ. ನಂತರ ನಮ್ಮ 250 ಕಿಲೋವ್ಯಾಟ್ AEM ಮತ್ತು PEM ಎಲೆಕ್ಟ್ರೋಲೈಸರ್ಗಳನ್ನು ಅನಾವರಣಗೊಳಿಸಲಾಗುವುದು. ಪ್ರತಿದಿನ ಹೆಚ್ಚು ಹೈಡ್ರೋಜನ್ ಅಗತ್ಯವಿರುವ ಕಾರ್ಖಾನೆಗಳಿಗಾಗಿ ರೂಪಿಸಲಾದ ಇವುಗಳನ್ನು ಮಂಗಳೂರಿನಲ್ಲೇ ವಿನ್ಯಾಸಗೊಳಿಸಿ, ಜೋಡಿಸಿ, ಪರೀಕ್ಷಿಸಲಾಗಿದೆ.

ಪುಣೆಯ ಸಿಎಸ್ಐಆರ್–ರಾಷ್ಟ್ರೀಯ ರಾಸಾಯನಿಕ ಪ್ರಯೋಗಾಲಯದ (CSIR–NCL) ನಿರ್ದೇಶಕರಾದ ಡಾ. ಆಶಿಷ್ ಲೇಲೆ ಅವರು, ಭಾರತದಲ್ಲಿ ಹೈಡ್ರೋಜನ್ ತಂತ್ರಜ್ಞಾನಗಳು ಪ್ರಯೋಗಾಲಯದಿಂದ ವಾಣಿಜ್ಯ ಬಳಕೆಯ ಹಂತಕ್ಕೆ ಹೇಗೆ ತಲುಪುತ್ತವೆ ಎಂಬ ಕುರಿತು ಪ್ರಧಾನ ಭಾಷಣ ಮಾಡಲಿದ್ದಾರೆ. ಬಳಿಕ ನಡೆಯುವ ತಜ್ಞರ ಉಪನ್ಯಾಸಗಳು ಮತ್ತು ಸಂವಾದ ಗೋಷ್ಠಿಗಳಲ್ಲಿ ಮೆಂಬ್ರೇನ್ ಎಲೆಕ್ಟ್ರೋಲೈಸರ್ಗಳನ್ನು ಪೈಲಟ್ ಘಟಕಗಳಿಂದ ಬಹು-ಮೆಗಾವ್ಯಾಟ್ ಸ್ಥಾವರಗಳ ಮಟ್ಟಕ್ಕೆ ಕೊಂಡೊಯ್ಯುವುದು, ಕಾರ್ಖಾನೆಯಲ್ಲೇ ಉತ್ಪಾದಿಸುವ ಹೈಡ್ರೋಜನ್ ಈಗಾಗಲೇ ಯಾವ ಉದ್ಯಮಗಳಿಗೆ ಲಾಭ ತರುತ್ತಿದೆ ಹಾಗೂ ಹೈಡ್ರೋಜನ್ ವೆಚ್ಚವನ್ನು ಇಳಿಸಲು ಬೇಕಾದ ಹೂಡಿಕೆಯನ್ನು ಹೇಗೆ ಒದಗಿಸುವುದು ಎಂಬ ವಿಷಯಗಳ ಕುರಿತು ಚರ್ಚೆ ನಡೆಯಲಿದೆ.

ಕರ್ನಾಟಕ ಸರ್ಕಾರದ ಮಾನ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವರಾದ ಶ್ರೀ ಎಂ. ಬಿ. ಪಾಟೀಲ್; ಕರ್ನಾಟಕ ಸರ್ಕಾರದ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ಯು. ಟಿ. ಖಾದರ್; ಮಾನ್ಯ ಲೋಕಸಭಾ ಸದಸ್ಯರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ; ಹಾಗೂ ಮಂಗಳೂರು ನಗರ ಉತ್ತರ ಕ್ಷೇತ್ರದ ಮಾನ್ಯ ಶಾಸಕರಾದ ಡಾ. ವೈ. ಭರತ್ ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವುದು ನಮಗೆ ಸಂತಸ ತಂದಿದೆ. ದೇಶದಾದ್ಯಂತದಿಂದ ನೀತಿ ನಿರೂಪಕರು, ಸರ್ಕಾರಿ ಅಧಿಕಾರಿಗಳು, ಸಂಶೋಧಕರು, ಶಿಕ್ಷಣ ತಜ್ಞರು, ಹೂಡಿಕೆದಾರರು ಮತ್ತು ಉದ್ಯಮಿಗಳು ಸಹ ಪಾಲ್ಗೊಳ್ಳಲಿದ್ದಾರೆ.

HYDGEN ಒಂದೇ ಗುರಿಯೊಂದಿಗೆ ಆರಂಭವಾಯಿತು: ಉದ್ಯಮಗಳಿಗೆ ಅವಲಂಬಿಸಬಹುದಾದ ಹೈಡ್ರೋಜನ್ ಅನ್ನು, ಮುಂಚಿತವಾಗಿ ಲೆಕ್ಕ ಹಾಕಬಹುದಾದ ವೆಚ್ಚದಲ್ಲಿ ಒದಗಿಸುವುದು. ದೊಡ್ಡ ಸಾಮರ್ಥ್ಯದ ವ್ಯವಸ್ಥೆಗಳು ಹಾಗೂ ಮಂಗಳೂರಿನಲ್ಲೇ ಬಿಡಿಭಾಗ ಪೂರೈಕೆದಾರರ ಸ್ಥಳೀಯ ಜಾಲದ ಮೂಲಕ, ಗಂಜಿಮಠ ಘಟಕವು ಈ ಗುರಿಯನ್ನು ಇನ್ನಷ್ಟು ಗ್ರಾಹಕರಿಗೆ ತಲುಪಿಸಲು ನೆರವಾಗುತ್ತದೆ. ಇಲ್ಲಿಂದ ನಾವು ಭಾರತ ಮತ್ತು ವಿದೇಶಗಳ ಗ್ರಾಹಕರಿಗೆ ಸೇವೆ ಒದಗಿಸುತ್ತೇವೆ. 2026ರ ಅಕ್ಟೋಬರ್ 15ರಂದು ಮಂಗಳೂರಿನ ಗಂಜಿಮಠದಲ್ಲಿರುವ HYDGEN ಘಟಕದಲ್ಲಿ ನಿಮ್ಮನ್ನು ಸ್ವಾಗತಿಸಲು ಎದುರು ನೋಡುತ್ತಿದ್ದೇವೆ.

ಇಂದಿನ ಪತ್ರಿಕಾಗೋಷ್ಠಿಯಲ್ಲಿ ಡಾ. ಕೃಷ್ಣ ಕುಮಾರ್, ಸಹ-ಸಂಸ್ಥಾಪಕ ಮತ್ತು ಸಿಒಒ (COO), ರಮ್ಯಶ್ರೀ ಡಿ.ಎಸ್., ಕಾರ್ಪೊರೇಟ್ ನಿರ್ದೇಶಕಿ, ಸಂಜಯ್ ನಾರಾಯಣನ್, ಚೀಫ್ ಆಫ್ ಸ್ಟಾಫ್, ಅಮೃತೇಶ್ ಶುಕ್ಲಾ, ಇವಿಪಿ (EVP) – ಮಾನವ ಸಂಪನ್ಮೂಲ ಮತ್ತು ಪರಿವರ್ತನೆ, ವೆಂಕಟರಾಮ ಪಿ.ಕೆ., ಎವಿಪಿ (AVP) – ಉತ್ಪಾದನೆ, ಚಂದ್ರಶೇಖರ ಐತಾಳ, ವಿಪಿ (VP) – ಆಡಳಿತ ಮತ್ತು ಸೌಲಭ್ಯ ನಿರ್ವಹಣೆ ಭಾಗವಹಿಸಿದ HYDGEN ತಂಡದ ಸದಸ್ಯರು ಭಾಗವಹಿಸಿದ್ದರು.