ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಲಿಕಟ್ಟೆ ಎಸ್ ಐ ಟಿ ಕಚೇರಿಗೆ ತನಿಖಾ ತಂಡದ ಅಧಿಕಾರಿಗಳು ಆಗಮಿಸಿದ್ದಾರೆ.

ಎಸ್ ಐಟಿ ಅಧಿಕಾರಿಗಳ ಸಭೆಯನ್ನು ಡಿಐಜಿ ಅನುಚೇತ್ ನಡೆಸಲಿದ್ದಾರೆ. ಜಿತೇಂದ್ರ ದಯಾಮ್ ಪ್ರಕರಣದ ತನಿಖಾಧಿಕಾರಿಯಾಗಿದ್ದಾರೆ. ದ.ಕ, ಉಡುಪಿ, ಉ.ಕ ಜಿಲ್ಲೆಗಳಿಂದ ತನಿಕಾ ತಂಡದ ಅಧಿಕಾರಿಗಳನ್ನು ನೇಮಿಸಲಾಗಿದೆ. ಧರ್ಮಸ್ಥಳ, ಎಸ್ಐ, ಮೂಲ್ಕಿ, ಬೈಂದೂರು ಇನ್ಸ್ ಪೆಕ್ಟರ್, 20ಕ್ಕೂ ಹೆಚ್ಚು ಅಧಿಕಾರಿಯ ಸಿಬ್ಬಂದಿಗಳ ಜೊತೆ ಮೀಟಿಂಗ್ ನಡೆಸಲಾಯಿತು.

