ಮಂಗಳೂರು: ಭಾರಿ ಮಳೆಯ  ಪರಿಣಾಮ ಮನೆಯ ಗೋಡೆ ಕುಸಿದು ಬಿದ್ದು ನಾಲ್ವರು‌ ದುರ್ಮರಣ ಹೊಂದಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ನಡೆದಿದೆ.

ಉಳ್ಳಾಲ ತಾಲೂಕಿನ ಕುತ್ತಾರು ಮದನಿ ನಗರ ಎಂಬಲ್ಲಿ ದುರ್ಘಟನೆ ನಡೆದಿದ್ದು, ಅಬೂಬಕ್ಕರ್ ಎಂಬವರಿಗೆ ಸಂಬಂಧಿಸಿದ ಮನೆಯ ಗೋಡೆ ಕುಸಿದಿದೆ. ಇದು ಪಕ್ಕದ ಯಾಸಿರ್ ಎಂಬವರ ಮನೆಯ ಗೋಡೆಗೆ ಬಿದ್ದು ಭಾರೀ ಅವಘಡ ಸಂಭವಿಸಿತು. ಮನೆಯೊಳಗಿದ್ದ ಯಾಸಿರ್(45), ಅವರ ಪತ್ನಿ ಮರಿಯಮ್ಮ(40) ಮಕ್ಕಳಾದ ರಿಯಾನ ಮತ್ತು ರಿಫಾನ ಸಾವಿಗೀಡಾದರು.

ರಾತ್ರಿ ಸುರಿದ ಭಾರೀ ಮಳೆಗೆ ಈ ದುರಂತ ಸಂಭವಿಸಿದೆ. ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಾಲ್ವರ ಮೃತದೇಹವನ್ನೂ ಸ್ಥಳೀಯರು ಹೊರತೆಗೆದಿದ್ದಾರೆ.