ಮಂಗಳೂರು: ಧ್ಯಾನಸಂಗೀತ ಅಕಾಡೆಮಿ ಕಲಾ ಟ್ರಸ್ಟಿನ ವಾರ್ಷಿಕೋತ್ಸವದ ಅಂಗವಾಗಿ ಒಂದು ದಿನದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತೋತ್ಸವವನ್ನು ಆಯೋಜಿಸಲಾಗಿದೆ. ಆಗಸ್ಟ್ 25ರಂದು ಉರ್ವಾಸ್ಟೋರಿನ ತುಳುಭವನದಲ್ಲಿ ಬೆಳಿಗ್ಗೆ 10.30 ಕ್ಕೆ ಪ್ರಾರಂಭವಾಗಲಿದೆ.

Kannada Invitation Back

ಈ ಕಾರ್ಯಕ್ರಮದಲ್ಲಿ ಖ್ಯಾತ ಕಲಾವಿದರಾದ ಮುಂಬೈಯ ಪಂ.ರಾಮ್ ದೇಶಪಾಂಡೆ ಹಾಗು ಮೈಸೂರಿನ ವಿದುಷಿ ಶ್ರೀಮತಿದೇವಿ ಇವರಿಂದ ಹಿಂದುಸ್ತಾನಿ ಗಾಯನ ಕಚೇರಿ ನಡೆಯಲಿದೆ. ಹಾರ್ಮೋನಿಯಂನಲ್ಲಿ ಹೇಮಂತ್ ಭಾಗವತ್ ಮತ್ತು ಪ್ರಸಾದ್ ಕಾಮತ್ ಮತ್ತು ತಬಲಾದಲ್ಲಿ ಗೋವಾದ ಡಾ। ಉದಯ್ ಕುಲಕರ್ಣಿ ಮತ್ತು ರಾಜೇಶ್ ಶ್ರೀನಿವಾಸ್ ಭಾಗವತ್ ಸಹಕರಿಸಲಿದ್ದಾರೆ. ಅಕಾಡೆಮಿಯ ವಿದ್ಯಾರ್ಥಿಗಳಿಂದ ಲಘು ಶಾಸ್ತ್ರೀಯ ಸಂಗೀತ ವೈವಿಧ್ಯ ನಡೆಯಲಿದೆ.

ಪಂ.ರಾಮ್ ದೇಶಪಾಂಡೆ ದೀಪ ಬೆಳಗಿಸುವರು. ಟ್ರಸ್ಟಿನ ಶ್ರೀಮತಿ ಲೋಲಾಕ್ಷಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜೇಶ್ ಜಿ., ಎಂಆರ್ ಪಿಎಲ್ ಜನರಲ್ ಮ್ಯಾನೇಜರ್ ಮಂಜುನಾಥ ಹೆಚ್.ವಿ., ಸಂಗೀತ ಪೋಷಕರಾದ ಶ್ರೀಮತಿ ಶ್ರೇಯಾ ಕಿರಣ್ ಶೆಣೈ ಮತ್ತು ಉರ್ವ ಕೊರಗಜ್ಜ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ರಾಜೇಶ್ ಉರ್ವ ಭಾಗವಹಿಸಲಿದ್ದಾರೆ. ಸಂಗೀತಾಸಕ್ತರಿಗೆ ಮುಕ್ತ ಪ್ರವೇಶವಿದೆ.