ಮಂಗಳೂರು : ಆರ್‌ ಎಸ್‌ ಎಸ್‌ 100 ವರ್ಷ ಪೂರೈಸಿದ ಹಿನ್ನಲೆಯಲ್ಲಿ ನಗರದ ಎಲ್ಲ ವಾರ್ಡ್ ಗಳಲ್ಲಿ ಹಿಂದೂ ಸಂಗಮ ನಡೆಯುತ್ತಿದ್ದು , ಹಿಂದೂ ಸಂಗಮ ಆಯೋಜನಾ ಸಮಿತಿ ಮಂಗಳಾದೇವಿ ವಲಯ ಪಾಂಡೇಶ್ವರ ಕಟ್ಟೆಯ ಬಳಿ SCS ಗ್ರೌಂಡ್ ನಲ್ಲಿ ಸಭಾ ಕಾರ್ಯಕ್ರಮ ನಡೆಯಿತು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಪಾಂಡೇಶ್ವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ದಿಂದ SCS ಗ್ರೌಂಡ್ ನ ವರೆಗೆ ಶೋಭಾಯಾತ್ರೆ ಹಮ್ಮಿ ಕೊಳ್ಳಲಾಯಿತು. ಶೋಭಾಯಾತ್ರೆಯಲ್ಲಿ ಕುಣಿತ ಭಜನೆ, ಬ್ಯಾಂಡ್ನಿಂದ ಸಹಸ್ರಾರು ಸಂಖ್ಯೆಯಲ್ಲಿ ಜನರು ಈ ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು.

ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಖ್ಯಾತ ಜೋತಿಷ್ಯರಾದ ಕರಣ್ ಜೋತಿಷ್ಯ , ರಾಜ ರತ್ನ ಸನಿಲ್, ಪ್ರಥವಿಶ್ ಧರ್ಮಸ್ಥಳ, ಕೃಷ್ಣ ರಾವ್, ತುಳಸಿ ಮೆಂಡೊನ್ , ರಾಜೇಶ್ ಪಾಂಡೇಶ್ವರ, ಗಣೇಶ್ ಪಾಂಡೇಶ್ವರ, ಸುರೇಖಾ ಪಾಂಡೇಶ್ವರ ಉಪಸ್ಥಿತರಿದ್ದು ಭಾರತ ಮಾತೆಯ ಭಾವ ಚಿತ್ರಕ್ಕೆ ಪುಷ್ಪ ನಮನ ಮಾಡಲಾಯಿತು.