ಮಂಗಳೂರು: ಅಕ್ರಮ ಗೋ ಸಾಗಟವನ್ನ ತಡೆದು 15 ಗೋವುಗಳನ್ನ ರಾಷ್ಟೀಯ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ರಕ್ಷಿಸಿದ್ದಾರೆ.

ಸೌಜನ್ಯ ಹೋರಾಟದ ಪ್ರಚಾರದ ಸಲುವಾಗಿ ಭಿತ್ತಿ ಪತ್ರಗಳ ತಡರಾತ್ರಿ ಅಂಟಿಸುವ ಕೆಲಸದಲ್ಲಿದ್ದ ಕಾರ್ಯಕರ್ತರಿಗೆ ಸಂಶಯಸ್ಪದಕವಾಗಿ ಪಿಕಪ್ ಒಂದರಲ್ಲಿ ದನ ಸಾಗಿಸುವುದು ಕಂಡು ಬಂದು ಗುರುವಾಯನಕೆರೆಯಿಂದ ಬೆನ್ನಟ್ಟಿ ಜಾರಿಗೆಬೈಲಿನಲ್ಲಿ ತಡೆದಾಗ ಮೇಲುಗಡೆಯಿಂದ ಬಾಳೆಗೊಣೆ ಸಾಗಿಸುವ ವಾಹನದಂದೆ ಬಿಂಬಿಸಿ ಅಡಿಭಾಗದಲ್ಲಿ ಅಮಾನುಷವಾಗಿ 15 ಗೋವುಗಳನ್ನ ಕಸಾಯಿಕಾನೆಗೆ ಸಾಗಿಸುತ್ತಿದ್ದ ಗೋವುಗಳನ್ನ ರಕ್ಷಿಸಿ ಪೋಲಿಸರಿಗೆ ಒಪ್ಪಿಸಲಾಗಿದೆ.