Bengaluru 29°C
Ad

ವಿಶ್ವ ಹಿಂದೂ ಪರಿಷತ್ ಮಂಗಳೂರು ಧರ್ಮ ಪ್ರಸಾರ ವತಿಯಿಂದ “ಹಿಂದವ ಸೋದರ ಸರ್ವೇ”

ವಿಶ್ವ ಹಿಂದೂ ಪರಿಷತ್ ಮಂಗಳೂರು ಧರ್ಮ ಪ್ರಸಾರ ವಿಭಾಗದ ವತಿಯಿಂದ "ಹಿಂದವ ಸೋದರ ಸರ್ವೇ" ಎಂಬ ಘೋಷ ವಾಕ್ಯದಂತೆ ಹಿಂದೂ ಸಮಾಜದಲ್ಲಿ ಸಾಮರಸ್ಯ ತರುವ ಮೂಲಕ ಹಿಂದೂಗಳು ನಾವೆಲ್ಲರೂ ಸಹೋದರು

ಮಂಗಳೂರು  :  ವಿಶ್ವ ಹಿಂದೂ ಪರಿಷತ್ ಮಂಗಳೂರು ಧರ್ಮ ಪ್ರಸಾರ ವಿಭಾಗದ ವತಿಯಿಂದ “ಹಿಂದವ ಸೋದರ ಸರ್ವೇ” ಎಂಬ ಘೋಷ ವಾಕ್ಯದಂತೆ ಹಿಂದೂ ಸಮಾಜದಲ್ಲಿ ಸಾಮರಸ್ಯ ತರುವ ಮೂಲಕ ಹಿಂದೂಗಳು ನಾವೆಲ್ಲರೂ ಸಹೋದರು ಎಂಬ ಭಾವನೆ ಮೂಡಿಸುವ ನಿಟ್ಟಿನಲ್ಲಿ ಇಂದು ತಾರೀಕು 16 ಜೂನ್ 2024 ಆದಿತ್ಯವಾರ ಬೆಳಿಗ್ಗೆ ನಾಗುರಿ ಪ್ರಖಂಡದ ಸೂಟರ್ ಪೇಟೆ ಪರಿಸರಕ್ಕೆ ಪೂಜ್ಯ ಚಿತ್ರಾಪುರ ಮಠಾಧೀಶರು ಶ್ರೀ ಶ್ರೀ ವಿದ್ಯೇoದ್ರ ತೀರ್ಥ ಶ್ರೀಪಾದರು ಪಾದಯಾತ್ರೆ ನಡೆಸಿ ನಂತರ ಶ್ರೀ ದೈವರಾಜ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಬೆಳಿಗ್ಗೆ 9:00 ಗಂಟೆಗೆ ಆಶೀರ್ವಚನ ನೀಡಿದರು, ಈ ಕಾರ್ಯಕ್ರಮದಲ್ಲಿ ಪ್ರಾಂತ ಧರ್ಮಪ್ರಸಾರ ಪ್ರಮುಖ್ ಸುನಿಲ್ ಕೆ ಆರ್, ಜಿಲ್ಲಾಧ್ಯಕ್ಷರಾದ ಎಚ್ ಕೆ ಪುರುಷೋತ್ತಮ, ವಿಭಾಗ ಸಹಕಾರ್ಯದರ್ಶಿ ಶಿವಾನಂದ್ ಮೆಂಡನ್, ಜಿಲ್ಲಾ ಉಪಾಧ್ಯಕ್ಷರು ಸಂಜೀವ ಸೂಟರ್ ಪೇಟೆ, ಸ್ಥಳೀಯ ಮನಾಪ ಸದಸ್ಯರು ಭರತ್ ಸೂಟರ್ ಪೇಟೆ, ಬಬ್ಬು ಸ್ವಾಮಿ ದೈವಸ್ಥಾನ ಅಧ್ಯಕ್ಷರಾದ ನವೀನ್ ಸೂಟರ್ ಪೇಟೆ ಉಪಸ್ಥಿತಿ ಇದ್ದರು.

Ad
Ad
Nk Channel Final 21 09 2023
Ad